ಮೊಟ್ಟೆ ಪ್ರಿಯರೇ ಗಮನಿಸಿ : ಈರುಳ್ಳಿ ದರಏರಿಕೆ ಆಯ್ತು ಈಗ ಮೊಟ್ಟೆ ಸರದಿ
ಬೆಂಗಳೂರು : ದೇಶದ ಹಲವೆಡೆ ಈಗಾಗಲೇ ಅಗತ್ಯ ವಸ್ತುಗಳ ದರ ಹೆಚ್ಚಳವಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿಬಿದ್ದಿದೆ. ಇನ್ನು ಈರುಳ್ಳಿ ದರವಂತೂ ದಿನೇ ದಿನೇ ಗಗನಮುಖಿಯಾಗಿದ್ದು, ಗ್ರಾಹಕರು ಖರೀದಿಸಲು ಹಿಂದೇಟು ಹಾಕಿದ್ದಾರೆ. ಇದರ ಬೆನ್ನಲ್ಲೇ ಮೊಟ್ಟೆ ದರವೂ ಏರಿಕೆಯಾಗಿದೆ
ಚಳಿಗಾಲದಲ್ಲಿ ಮೊಟ್ಟೆ ತಿನ್ನುವವರ ಸಂಖ್ಯೆ ಹೆಚ್ಚು ಎಂತಲೇ ಅಂದಾಜಿಸಲಾಗಿದೆ. ಹೀಗಾಗಿ ಈ ವೇಳೆಯಲ್ಲಿ ದೇಹವನ್ನು ಬೆಚ್ಚಿಗಿಡುವುದರ ಜತೆಗೆ ದೇಹದ ಇಮ್ಯುನಿಟಿ ಶಕ್ತಿ ಚೆನ್ನಾಗಿರಬೇಕು ಎಂಬ ಉದ್ದೇಶದಿಂದ ಮೊಟ್ಟೆಯನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಮತ್ತೊಂದೆಡೆ ಕ್ರಿಸ್ ಮಸ್ ಹಾಗೂ ಹೊಸವರ್ಷಾಚರಣೆಯೂ ಸಮೀಪಿಸುತ್ತಿದ್ದು, ಕೇಕ್ ಸೇರಿದಂತೆ ಇತರೇ ಖಾದ್ಯಗಳ ತಯಾರಿಕೆಗೆ ಅಗತ್ಯವಾಗಿ ಮೊಟ್ಟೆ ಬೇಕೇಬೇಕಾಗಿದೆ. ಹೀಗಾಗಿ ಕಳೆದ ಎರಡು ವಾರಗಳಿಂದ ಕೋಳಿಮೊಟ್ಟೆ ದರ ದಿನಂಪ್ರತಿ 5 ರಿಂದ 10 ಪೈಸೆಯಂತೆ ಹೆಚ್ಚಾಗಿದೆ.
ಸಗಟು ದರದಲ್ಲಿಒಂದು ಮೊಟ್ಟೆಗೆ 4.55 ಪೈಸೆಯಿದ್ದು, ಚಿಲ್ಲರೆ ದರದಲ್ಲಿ ಫಾರಂ ಕೋಳಿ ಮೊಟ್ಟೆ 5.50 ರೂ.ವರೆಗೆ ಮಾರಾಟವಾಗುತ್ತಿದೆ. ನಾಟಿ ಕೋಳಿ ಮೊಟ್ಟೆ 7-8 ರೂ.ವರೆಗೆ ತಲುಪಿದೆ.
ಸಿಲಿಕಾನ್ ಸಿಟಿ ಬೆಂಗಳೂರು ಮಾತ್ರವಲ್ಲದೇ, ನೆರೆಯ ರಾಜ್ಯ ಆಂಧ್ರಪ್ರದೇಶ, ತೆಲಂಗಾಣ, ಸೇರಿದಂತೆ ಇತರೇ ರಾಜ್ಯಗಳ ಮಾರುಕಟ್ಟೆಗಳಲ್ಲೂ ಮೊಟ್ಟೆ ದರ ಏರಿಕೆಯಾಗಿದೆ..

ಮೊಟ್ಟೆ ಪ್ರಿಯರೇ ಗಮನಿಸಿ
Reviewed by Space encyclopaedia
on
December 14, 2019
Rating:
Reviewed by Space encyclopaedia
on
December 14, 2019
Rating:

No comments: