ಜನಸಾಮಾನ್ಯರಿಗೆ ಕೇಂದ್ರ ಸರ್ಕಾರದಿಂದ 'ಸಿಹಿ ಸುದ್ದಿ'
ದೈನಂದಿನ ಬಳಕೆಯ ಈರುಳ್ಳಿ ಬೆಲೆ ಗಗನಕ್ಕೇರಿದ್ದ ಕಾರಣ ಗ್ರಾಹಕರು ಕಂಗಾಲಾಗಿ ಹೋಗಿದ್ದರು. ಈ ಬಾರಿ ಸುರಿದ ಅಕಾಲಿಕ ಮಳೆಯಿಂದಾಗಿ ಈರುಳ್ಳಿ ಬೆಳೆ ಕೈಕೊಟ್ಟ ಪರಿಣಾಮ ಸರಬರಾಜು ಕಡಿಮೆಯಾಗಿದ್ದು, ಇದರಿಂದಾಗಿ ಕೆಜಿ ಈರುಳ್ಳಿ ಬೆಲೆ 100 -150 ರೂಪಾಯಿಗಳಾಗಿತ್ತು.
ಈರುಳ್ಳಿ ಬೆಲೆಯನ್ನು ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರ ರಫ್ತಿನ ಮೇಲೆ ನಿಷೇಧ ಹೇರಿದ್ದು ಇದರ ಜೊತೆಗೆ ಹೊರದೇಶಗಳಿಂದ ದೊಡ್ಡ ಪ್ರಮಾಣದಲ್ಲಿ ಈರುಳ್ಳಿಯನ್ನು ಆಮದು ಮಾಡಿಕೊಳ್ಳಲು ಮುಂದಾಗಿತ್ತು.
ಮೊದಲ ಹಂತದಲ್ಲಿ ಈಗಾಗಲೇ 790 ಟನ್ ಈರುಳ್ಳಿ ಆಮದಾಗಿದ್ದು, ಆದರೂ ಬೆಲೆ ನಿಯಂತ್ರಣಕ್ಕೆ ಬಂದಿರಲಿಲ್ಲ. ಇದೀಗ ಮತ್ತೆ 12000 ಟನ್ ಈರುಳ್ಳಿ ಡಿಸೆಂಬರ್ ಅಂತ್ಯಕ್ಕೆ ಭಾರತಕ್ಕೆ ಬರಲಿದ್ದು, ಬಳಿಕ ಬೆಲೆ ಇಳಿಕೆಯಾಗಲಿದೆ ಎಂದು ಹೇಳಲಾಗಿದೆ.
ಜನಸಾಮಾನ್ಯರಿಗೆ ಕೇಂದ್ರ ಸರ್ಕಾರದಿಂದ 'ಸಿಹಿ ಸುದ್ದಿ'
Reviewed by Space encyclopaedia
on
December 23, 2019
Rating:
Reviewed by Space encyclopaedia
on
December 23, 2019
Rating:

No comments: