Breaking News

test

ರಾಜ್ಯದ 'ಸರ್ಕಾರಿ ನೌಕರ'ರಿಗೆ ಸಿಹಿ ಸುದ್ದಿ : ನೌಕರರಿಗೆ 'ಆನ್ ಲೈನ್ ರಜೆ' ವ್ಯವಸ್ಥೆ ಜಾರಿಗೊಳಿಸಿ ಸರ್ಕಾರದ ಆದೇಶ


ರಾಜ್ಯದ 'ಸರ್ಕಾರಿ ನೌಕರ'ರಿಗೆ ಸಿಹಿ ಸುದ್ದಿ : ನೌಕರರಿಗೆ 'ಆನ್ ಲೈನ್  ರಜೆ' ವ್ಯವಸ್ಥೆ ಜಾರಿಗೊಳಿಸಿ ಸರ್ಕಾರದ ಆದೇಶ



ಬೆಂಗಳೂರು : ಇದುವರೆಗೆ ರಾಜ್ಯದ ಸರ್ಕಾರಿ ನೌಕರರು ಪತ್ರದ ಮೂಲಕ, ಇಲಾಖೆಯ ಮುಖ್ಯಸ್ಥರಿಗೆ ತಿಳಿಸುವ ಮೂಲಕ ರಜೆಯನ್ನು ಪಡೆದುಕೊಳ್ಳುವಂತ ಸೌಲಭ್ಯ ಜಾರಿಯಲ್ಲಿತ್ತು. ಇದೀಗ ಇಂತಹ ವ್ಯವಸ್ಥೆಗೆ ಇತಿಶ್ರೀ ಹಾಡಿದ್ದು, ಮೊಟ್ಟ ಮೊದಲಿಗೆ 01-01-2020ರಿಂದ ಸಚಿವಾಲಯದ ಸರ್ಕಾರಿ ನೌಕರರಿಗೆ ಆನ್ ಲೈನ್ ಮೂಲಕ ರಜೆ ಹಾಕುವ ಸೌಲಭ್ಯ ಜಾರಿಗೊಳಿಸಿ, ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ರಜೆ ಪಡೆಯುವ ಕುರಿತಂತೆ ಸರ್ಕಾರಿ ನೌಕರರಿಗೆ ಇದ್ದ ಕಿರಿಕಿರಿ ನಿವಾರಿಸಿ, ಸಿಹಿ ಸುದ್ದಿಯನ್ನು ನೀಡಿದೆ.
ರಾಜ್ಯದ ಸರ್ಕಾರಿ ನೌಕರರಿಗೆ ರಜೆ ಹಾಕುವ ಸೌಲಭ್ಯ, ಇನ್ನೂ ಪತ್ರ, ಹೇಳಿಕೆಯಲ್ಲಿಯೇ ಇದೆ. ಆದ್ರೇ ಇದೀಗ ಇ-ಕಛೇರಿ ತಂತ್ರಾಂಶ ಜಾರಿಗೆ ಬಂದ ನಂತ್ರ, ಹೊಸ ವ್ಯವಸ್ಥೆಗೆ ಬದಲಾಗುತ್ತಿದೆ. ಅದೇ ಆನ್ ಲೈನ್ ಮೂಲಕ ಇ-ಕಛೇರಿ ತಂತ್ರಾಂಶ ಬಳಸಿಕೊಂಡು, ಸಚಿವಾಲಯದ ಅಧಿಕಾರಿ ಮತ್ತು ಸಿಬ್ಬಂದಿಗಳು ರಜೆ ಪಡೆಯುವ ಸೌಲಭ್ಯವನ್ನು ಜಾರಿಗೊಳಿಸಿದೆ.
ಮೊಟ್ಟ ಮೊದಲಿಗೆ ಸಚಿವಾಲಯದ ಮಟ್ಟದಲ್ಲಿನ ಎಲ್ಲಾ ಗ್ರೂಪ್ ಎ, ಬಿ, ಸಿ ಮತ್ತು ಡಿ ವರ್ಗದ ಅಧಿಕಾರಿ ಮತ್ತು ನೌಕರರುಗಳಿಗೆ ಇ-ಲೀವ್(ರಜೆ ನಿರ್ವಹಣಾ ವ್ಯವಸ್ಥೆ) ತಂತ್ರಾಂಶವನ್ನು ಜಾರಿಗೆ ತರುತ್ತಿದೆ. ಈ ತಂತ್ರಾಂಶದ ಮೂಲಕ ದಿನಾಂಕ 01-01-2020ರಿಂದ ಕಡ್ಡಾಯವಾಗಿ ಇ-ಲೀವ್ ಮೂಲಕವೇ ರಜೆ ಸೌಲಭ್ಯ ಪಡೆಯಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಅಂದಹಾಗೇ ಸಚಿವಾಲಯದ ಅಧಿಕಾರಿಗಳು ಮತ್ತು ನೌಕರರು ಇ-ಆಫೀಸ್ ನಲ್ಲಿ ಈಗಾಗಲೇ ನೀಡಲಾಗಿರುವ ತಮ್ಮ ಯೂಸರ್ ಐಡಿ ಹಾಗೂ ಪಾಸ್ ವರ್ಡ್ ಉಪಯೋಗಿಸಿ ಲಾಗಿನ್ ಆಗಿ, ಇ-ಆಫೀಸ್ ಸರ್ವಿಸ್ ನ ಲೀವ್ ಮ್ಯಾನೇಜ್ಮಂಟ್ ಸರ್ವಿಸ್ ನಲ್ಲಿಯೇ ರಜೆಯ ಮನವಿ ಸಲ್ಲಿಸುವಂತೆ ಸೂಚಿಸಿದೆ. ಹೀಗಾಗಿ ಇದು ಇದೀಗ ಸಚಿವಾಲಯದ ಅಧಿಕಾರಿಗಳು ಮತ್ತು ನೌಕರರಿಗೆ ಮಾತ್ರ ಜಾರಿಯಾಗುತ್ತಿದ್ದರೂ, ಮುಂದಿನ ದಿನಗಳಲ್ಲಿ ರಾಜ್ಯದ ಸರ್ಕಾರಿ ನೌಕರರಿಗೂ ವಿಸ್ತರಣೆಯಾಗುವುದರಲ್ಲಿ ಎರಡು ಮಾತಿಲ್ಲ.
ರಾಜ್ಯದ 'ಸರ್ಕಾರಿ ನೌಕರ'ರಿಗೆ ಸಿಹಿ ಸುದ್ದಿ : ನೌಕರರಿಗೆ 'ಆನ್ ಲೈನ್ ರಜೆ' ವ್ಯವಸ್ಥೆ ಜಾರಿಗೊಳಿಸಿ ಸರ್ಕಾರದ ಆದೇಶ ರಾಜ್ಯದ 'ಸರ್ಕಾರಿ ನೌಕರ'ರಿಗೆ ಸಿಹಿ ಸುದ್ದಿ : ನೌಕರರಿಗೆ 'ಆನ್ ಲೈನ್  ರಜೆ' ವ್ಯವಸ್ಥೆ ಜಾರಿಗೊಳಿಸಿ ಸರ್ಕಾರದ ಆದೇಶ Reviewed by Space encyclopaedia on December 24, 2019 Rating: 5

No comments:

Powered by Blogger.