Breaking News

test

ಆ ಸ್ಟೈಲು ನೋಡು, ಲುಕ್ಕು ನೋಡು ಹಾಕು ಸ್ಟೆಪ್ಪು.. ಕ್ರಿಸ್​​ಮಸ್​​ ದಿನ 'ದರ್ಶನ' ಕೊಟ್ಟ 'ರಾಬರ್ಟ್'​..!


ಆ ಸ್ಟೈಲು ನೋಡು, ಲುಕ್ಕು ನೋಡು ಹಾಕು ಸ್ಟೆಪ್ಪು.. ಕ್ರಿಸ್​​ಮಸ್​​ ದಿನ 'ದರ್ಶನ' ಕೊಟ್ಟ 'ರಾಬರ್ಟ್'..



ಆ ಸ್ಟೈಲು ನೋಡು, ಲುಕ್ಕು ನೋಡು ಹಾಕು ಸ್ಟೆಪ್ಪು ಅಂತ ಹಾಡಿ ಕುಣಿಯುವಂತಿದೆ ಕ್ರಿಸಮಸ್​ ದಿನ ಅಭಿಮಾನಿಗಳಿಗೆ ದರ್ಶನ್ ಕೊಟ್ಟ ರಾಬರ್ಟ್​ ಗಿಫ್ಟ್​..!
ರಾಬರ್ಟ್ ಚಿತ್ರತಂಡ ದರ್ಶನ್ ಅಭಿಮಾನಿಗಳಿಗೆ ಕ್ರಿಸ್ಮಸ್​​ ಹಬ್ಬದ ಉಡುಗೊರೆಯಾಗಿ ಇಂದು ಚಿತ್ರದ ಫಸ್ಟ್​​ ಲುಕ್ ಮೋಷನ್​ ಪೋಸ್ಟರ್​​​ ರಿಲೀಸ್​ ಮಾಡಿದೆ.
ಚಿತ್ರದ ಮೊದಲ ಪೋಸ್ಟರ್‌ನಲ್ಲಿ ಬೈಕ್ ಮೇಲೆ ದರ್ಶನ್‌ ಬೆನ್ನು ತೋರಿಸಿ ಕೂತಿದ್ರು. ಡಿಫ್ರೆಂಟ್ ಹೇರ್‌ಸ್ಟೈಲ್‌ನಲ್ಲಿ ಪೋಸ್‌ ಕೊಟ್ಟಿದ್ದ ದರ್ಶನ್ ಲುಕ್ ಹೆಂಗಿರುತ್ತೆ? ಡೈರೆಕ್ಟ್ ಆಗಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಕುತೂಹಲ ಅಂದಿನಿಂದಲೂ ಅಭಿಮಾನಿಗಳನ್ನ ಕಾಡ್ತಿತ್ತು. ಇದಕ್ಕೆ ಇಂದು ಉತ್ತರ ಸಿಕ್ಕಿದೆ.
ಕಪ್ಪು ಬಣ್ಣದ ಜಾಕೆಟ್​, ಕತ್ತಿನಲ್ಲಿ ಶಿಲುಬೆಯ ಚೈನ್​, ಕೈಯಲ್ಲಿ ಗನ್ ಹಿಡಿದಿರೋ ದರ್ಶನ್, ಲಾಂಗ್ ಹೇರ್​​ನಲ್ಲಿ ಡಿಫರೆಂಟ್​ ಆಗಿ ಕಾಣಿಸುತ್ತಿದ್ದಾರೆ.
ಈ ಮೂಲಕ ಚಿತ್ರದ ನಿರೀಕ್ಷೆ ಹೆಚ್ಚಾಗಿದೆ.
ಸದ್ಯ ವಾರಣಾಸಿಯಲ್ಲಿ ಚಿತ್ರತಂಡ ಕೊನೆ ಹಂತದ ಚಿತ್ರೀಕರಣದಲ್ಲಿ ಬ್ಯುಸಿಯಿದ್ದು, ಅಲ್ಲಿಂದ ವಾಪಸ್ಸಾದ ನಂತ್ರ ಚಿತ್ರದ ಪೋಸ್ಟ್‌ ಪ್ರೊಡಕ್ಷನ್ ನಡೆಯಲಿದೆ.
ತರುಣ್ ಸುಧೀರ್ ನಿರ್ದೇಶನದ ರಾಬರ್ಟ್​ ಸಿನಿಮಾ ಯುುಗಾದಿ ಹಬ್ಬಕ್ಕೆ ರಿಲೀಸ್ ಆಗೋ ಸಾಧ್ಯತೆಯಿದೆ. ಚಿತ್ರಕ್ಕೆ ಉಮಾಪತಿ ಬಂಡವಾಳ ಹಾಕಿದ್ದು,ಆಶಾ ಭಟ್ ನಾಯಕಿಯಾಗಿ ದರ್ಶನ್​​ಗೆ ಜೊತೆಯಾಗಿದ್ದಾರೆ. ಅರ್ಜುನ್ ಜನ್ಯ ಹಾಡುಗಳಿಗೆ ಸಂಗೀತ ಹಾಗೂ ಹರಿಕೃಷ್ಣ ಹಿನ್ನೆಲೆ ಸಂಗೀತ ನೀಡಿದ್ದಾರೆ.

ಆ ಸ್ಟೈಲು ನೋಡು, ಲುಕ್ಕು ನೋಡು ಹಾಕು ಸ್ಟೆಪ್ಪು.. ಕ್ರಿಸ್​​ಮಸ್​​ ದಿನ 'ದರ್ಶನ' ಕೊಟ್ಟ 'ರಾಬರ್ಟ್'​..! ಆ ಸ್ಟೈಲು ನೋಡು, ಲುಕ್ಕು ನೋಡು ಹಾಕು ಸ್ಟೆಪ್ಪು.. ಕ್ರಿಸ್​​ಮಸ್​​ ದಿನ 'ದರ್ಶನ' ಕೊಟ್ಟ 'ರಾಬರ್ಟ್'​..! Reviewed by Space encyclopaedia on December 24, 2019 Rating: 5

No comments:

Powered by Blogger.