Breaking News

test

ಮನೆ ಕಟ್ಟೋರಿಗೆ ಗುಡ್ ನ್ಯೂಸ್

ಮನೆ ಕಟ್ಟೋರಿಗೆ ಗುಡ್ ನ್ಯೂಸ್ : ಸದ್ಯದಲ್ಲೇ ತೆಲಂಗಾಣ ಮಾದರಿಯಲ್ಲೇ ರಾಜ್ಯದಲ್ಲೂ ಮರಳು ನೀತಿ ಜಾರಿ
ರಾಯಚೂರು : ರಾಜ್ಯದಲ್ಲಿ ಮಧ್ಯಮ ವರ್ಗದವರಿಗೆ ಮನೆ ಕಟ್ಟುವ ಕನಸಿಗೆ ಗಗನಕ್ಕೇರಿರುವ ಮರಳು ಬೆಲೆ, ತಣ್ಣೀರೆರಚುತ್ತಿದೆ. ಇಂತಹ ಮರಳು ಸಾಮಾನ್ಯ ವರ್ಗದವರಿಗೂ ಸೇರಿದಂತೆ ಮಧ್ಯಮ ವರ್ಗದವರಿಗೂ ಕೈಗೆಟುಕುವ ಬೆಲೆಯಲ್ಲಿ ದೊರೆಯಬೇಕು. ಹೀಗಾಗಿ ರಾಜ್ಯದಲ್ಲೂ ತೆಲಂಗಾಣ ಮಾದರಿಯಲ್ಲೇ ಮರಳು ನೀತಿ ಜಾರಿಗೆ ತರಲು ಸರ್ಕಾರ ಮುಂದಾಗಿದೆ ಎಂಬುದಾಗಿ ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿಸಿ ಪಾಟೀಲ್ ಹೇಳಿದ್ದಾರೆ. ಈ ಮೂಲಕ ಮನೆ ಕಟ್ಟೋರಿಗೆ ಗುಡ್ ನ್ಯೂಸ್ ನೀಡಿದ್ದಾರೆ.



ತೆಲಂಗಾಣದಲ್ಲಿ, ಮರಳು ವಿತರಣೆಗೆ ಕಾರ್ಪೋರೇಷನ್‌ ಮಾಡಲಾಗಿದೆ. ಅಲ್ಲಿ ಕಾರ್ಪೋರೇಷನ್‌ ಮಾಡಿ, ಯಾರ್ಡ್‌ಗಳ ಮೂಲಕ ಜನತೆಗೆ ಮರಳು ವಿತರಿಸಲಾಗುತ್ತಿದೆ. ಇಂತಹ ನೀತಿಯಿಂದಾಗಿ ತೆಲಂಗಾಣದಲ್ಲಿ ಮರಳಿನ ಸಮಸ್ಯೆಯಾಗಲಿ, ಬೆಲೆ ಏರಿಕೆಯ ಬಿಸಿಯಾಗಲೀ ಮನೆ ಕಟ್ಟೋರಿಗೆ ತಟ್ಟುತ್ತಿಲ್ಲ.
ಇಂತಹ ಮಾದರಿಯ ನೀತಿಯನ್ನು ರಾಜ್ಯ ಸರ್ಕಾರ ಇದೀಗ ರಾಜ್ಯದಲ್ಲೂ ಜಾರಿಗೆ ತರಲು ಮುಂದಾಗಿದೆ.

ಈ ಕುರಿತಂತೆ ರಾಯಚೂರಿನಲ್ಲಿ ತಿಳಿಸಿರುವ ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ ಸಿ ಪಾಟೀಲ್, ರಾಜ್ಯದಲ್ಲಿ ಮನೆ ಕಟ್ಟೋರಿಗೆ ಗಗನಕ್ಕೇರಿದ ಮರಳು ಬೆಲೆ ಏರಿಕೆಯಿಂದ ಸಮಸ್ಯೆ ಉಂಟಾಗಿದೆ. ಈ ಮೂಲಕ ಮಧ್ಯಮ ವರ್ಗದವರು ಸೇರಿದಂತೆ ಅನೇಕರು ಮನೆ ಕಟ್ಟೋಕೆ ಮರಳು ಬೆಲೆ ಕೈ ಸುಡುತ್ತಿದೆ. ಇಂತಹ ಗಗನಕ್ಕೇರಿದ ಬೆಲೆ ನಿಯಂತ್ರಿಸುವ ಸಲುವಾಗಿ ತೆಲಂಗಾಣ ಮಾದರಿಯಲ್ಲಿಯೇ ಮರಳು ನೀತಿಯನ್ನು ರಾಜ್ಯದಲ್ಲೂ ಜಾರಿಗೆ ತರಲು ಮುಂದಾಗಿದೆ ಎಂಬುದಾಗಿ ತಿಳಿಸಿದ್ದಾರೆ. ಈ ಮೂಲಕ ಮನೆ ಕಟ್ಟುವವರಿಗೆ ಗುಡ್ ನ್ಯೂಸ್ ನೀಡಿದ್ದಾರೆ.

ಮನೆ ಕಟ್ಟೋರಿಗೆ ಗುಡ್ ನ್ಯೂಸ್ ಮನೆ ಕಟ್ಟೋರಿಗೆ ಗುಡ್ ನ್ಯೂಸ್ Reviewed by Space encyclopaedia on December 14, 2019 Rating: 5

No comments:

Powered by Blogger.