ಗಂಗಾ ಘಾಟ್ ನಲ್ಲಿ ಮುಗ್ಗರಿಸಿ ಬಿದ್ದರೂ ಪ್ರಧಾನಿ ಮೋದಿ,
ಲಿಂಕ್ ಕ್ಲಿಕ್ ಮಾಡಿ
ಕಾನ್ಪುರ: ಗಂಗಾ ಘಾಟ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಲು ಎಡವಿ ಮುಗ್ಗರಿಸಿ ಬಿದ್ದಿದ್ದಾರೆ.
ನಮಾಮಿ ಗಂಗಾ ಯೋಜನೆಯ ಪರಿಶೀಲನೆಗೆ ಉತ್ತರ ಪ್ರದೇಶದ ಕಾನ್ಪುರಕ್ಕೆ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಗಂಗಾ ಘಾಟ್ ಗೆ ತೆರಳಿದ್ದ ಮೋದಿ ಅವರು ಗಂಗಾ ನದಿಯಲ್ಲಿ ಸುಮಾರು 50 ನಿಮಿಷಗಳ ಕಾಲ ದೋಣಿ ವಿಹಾರ ನಡೆಸಿದ್ದರು. ನಂತರ ಈ ಘಟನೆ ನಡೆದಿದೆ.
ಸ್ವಚ್ಛತಾ ಕಾರ್ಯವನ್ನು ಪರಿಶೀಲಿಸಿದ ನಂತರ ಮೋದಿ ಸ್ವಚ್ಚತಾ ಕಾರ್ಯದ ಪ್ರಗತಿಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ನಂತರ ನದಿ ತೀರಕ್ಕೆ ಇಳಿದ್ದರು. ನಂತರ ಮೆಟ್ಟಿಲು ಹತ್ತುವಾಗ ಎಡವಿ ಬಿದ್ದಿದ್ದಾರೆ. ಕೂಡಲೇ ಭದ್ರತಾ ಸಿಬ್ಬಂದಿ ಅವರನ್ನು ಮೇಲಕ್ಕೆತ್ತಿದರು.
ಗಂಗಾ ಘಾಟ್ ನಲ್ಲಿ ಮುಗ್ಗರಿಸಿ ಬಿದ್ದರೂ ಪ್ರಧಾನಿ ಮೋದಿ, ವಿಡಿಯೋ!
Reviewed by Space encyclopaedia
on
December 14, 2019
Rating:
No comments: