Breaking News

test

₹1,300 ಕೋಟಿ ಮೌಲ್ಯದ ಮಾದಕ ವಸ್ತು ವಶ(ಕೊಕೇನ್‌)

₹1,300 ಕೋಟಿ ಮೌಲ್ಯದ ಮಾದಕ ವಸ್ತು ವಶ
ನವದೆಹಲಿ: ಅಂತರರಾಷ್ಟ್ರೀಯ ಮಟ್ಟದ ಮಾದಕವಸ್ತು ಜಾಲವನ್ನು ಭೇದಿಸಿರುವ ಮಾದಕವಸ್ತು ನಿಗ್ರಹ ಘಟಕ (ಎನ್‌ಸಿಬಿ) ಒಂಬತ್ತು ಮಂದಿಯನ್ನು ಬಂಧಿಸಿದೆ. ಅಲ್ಲದೆ ₹1,300 ಕೋಟಿ ಮೌಲ್ಯದ ಮಾದಕ ವಸ್ತುವನ್ನು ವಶಕ್ಕೆ ‍ಪಡೆದಿದೆ ಎಂದು ಅಧಿಕಾರಿಗಳು ಶನಿವಾರ ಹೇಳಿದ್ದಾರೆ.
20 ಕೆ.ಜಿ ಕೊಕೇನ್‌ ಅನ್ನು ಶುಕ್ರವಾರ ವಶಪಡಿಸಿಕೊಳ್ಳಲಾಗಿದೆ. ದೇಶದಲ್ಲಿ ಇದುವರೆಗೆ ಇಷ್ಟು ತೂಕದ ಕೊಕೇನ್‌ ಅನ್ನು ಪಡಿಸಿಕೊಂಡಿರಲಿಲ್ಲ. ಇದರ ಮಾರಾಟ ಜಾಲ ದೆಹಲಿ, ಎನ್‌ಸಿಆರ್, ಪಂಜಾಬ್‌, ಉತ್ತರಾಖಂಡ, ಮಹಾರಾಷ್ಟ್ರದವರೆಗೂ ಹಬ್ಬಿತ್ತು. ಆರೋಪಿಗಳಿಗೆ ಆಸ್ಟ್ರೇಲಿಯಾ, ಕೆನಡಾ, ಅಮೆರಿಕ, ಇಂಡೊನೇಷ್ಯಾ, ಶ್ರೀಲಂಕಾ, ಕೊಲಂಬಿಯಾ, ಮಲೇಷ್ಯಾ ಮತ್ತು ನೈಜೀರಿಯಾದ ಸಂಪರ್ಕವೂ ಇತ್ತು.
ಈ ಜಾಲದ ಮಾರಾಟದಲ್ಲಿ ಭಾಗಿಯಾಗಿದ್ದ ಐವರು ಭಾರತೀಯರು, ಅಮೆರಿಕ ಮತ್ತು ಇಂಡೊನೇಷ್ಯಾದ ಒಬ್ಬರು ಹಾಗೂ ಇಬ್ಬರು ನೈಜೀರಿಯಾ ಪ್ರಜೆಗಳನ್ನು ಬಂಧಿಸಲಾಗಿದೆ

₹1,300 ಕೋಟಿ ಮೌಲ್ಯದ ಮಾದಕ ವಸ್ತು ವಶ(ಕೊಕೇನ್‌) ₹1,300 ಕೋಟಿ ಮೌಲ್ಯದ ಮಾದಕ ವಸ್ತು ವಶ(ಕೊಕೇನ್‌) Reviewed by Space encyclopaedia on December 14, 2019 Rating: 5

No comments:

Powered by Blogger.