ಸಿದ್ದಗಂಗಾ ಮಠದಲ್ಲಿ ಮೋದಿ, ಇಲ್ಲಿದೆ ಪ್ರಧಾನಿ ಭಾಷಣದ ಹೈಲೈಟ್ಸ್
ಬೆಂಗಳೂರು,ಜ.2- ನೀರಿನ ರಕ್ಷಣೆ ಮತ್ತು ಪ್ಲಾಸ್ಟಿಕ್ ಮುಕ್ತ ಭಾರತ ನಿರ್ಮಾಣಕ್ಕೆ ಸಾಧುಸಂತರು ಕೈ ಜೋಡಿಸಬೇಕೆಂದು ಪ್ರಧಾನಿ ನರೇಂದ್ರಮೋದಿ ಮನವಿ ಮಾಡಿದ್ದಾರೆ. ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಅವರು, ಸಿದ್ದಗಂಗಾ ಮಠದ ಹಿರಿಯ ಶ್ರೀಗಳಾದ ಡಾ.ಶ್ರೀಶಿವಕುಮಾರಸ್ವಾಮೀಜಿಗಳ ಗದ್ದುಗೆಗೆ ನಮನ ಸಲ್ಲಿಸಿ, ಶ್ರೀಗಳ ವಸ್ತುಪ್ರದರ್ಶನ ಮಳಿಗೆ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿದ ಬಳಿಕ ಮಾತನಾಡಿದ ಅವರು, ದೇಶಕ್ಕೆ ಸಾಧುಸಂತರ ಕೊಡುಗೆ ಅಪಾರವಾಗಿದೆ ಎಂದು ಕೊಂಡಾಡಿದರು.
2014ರ ನಂತರ ನವಭಾರತ ನಿರ್ಮಾಣದ ಧಿಕ್ಕೆ ಬದಲಾಗಿದೆ. ಅಭಿವೃದ್ದಿಯಲ್ಲಿ ನಾವು ವೇಗವಾಗಿ ಮುನ್ನಡೆಯುತ್ತಿದ್ದೇವೆ ಎಂದು ಹೇಳಿದರು. ದೇಶದ ಸಾಧುಸಂತರಲ್ಲಿ ನಾನು ಮೂರು ಬೇಡಿಕೆಗಳನ್ನು ಮಂಡಿಸುತ್ತಿದ್ದೇನೆ.ದಲನೆಯದಾಗಿ ಭಾರತದ ಪುರಾತನ ಸಂಸ್ಕøತಿಯ ಪುನರುಜ್ಜೀವನಕ್ಕೆ ಮತ್ತು ಉತ್ತಮ ಸಂಸ್ಕಾರ ಕಲಿಸಲು ಸಂತರು ಜಾಗೃತಿ ಮೂಡಿಸಬೇಕು.
2ನೇಯದಾಗಿ ಪರಿಸರ ರಕ್ಷಣೆಗೆ ಸಹಕಾರ ನೀಡಬೇಕು. ಏಕಬಳಕೆಯ ಪ್ಲಾಸ್ಟಿಕ್‍ನ್ನು ಬಳಸದಂತೆ ಸಮಾಜಕ್ಕೆ ಕರೆ ನೀಡಬೇಕು. ಅತ್ಯಮೂಲ್ಯವಾದ ಜಲಸಂಪತ್ತನ್ನು ರಕ್ಷಣೆ ಮಾಡಲು ಮುಂದಾಗಬೇಕೆಂದು ಮನವಿ ಮಾಡುವುದಾಗಿ ಹೇಳಿದರು. ದೇಶದ ಪ್ರತಿಯೊಂದು ಮನೆಗೂ ಅಡುಗೆ ಅನಿಲ ಪೂರೈಕೆ, ಬಯಲು ಮುಕ್ತ ಶೌಚಾಲಯ ನಿರ್ಮಾಣ ನಮ್ಮ ಆದ್ಯತೆಗಳಾಗಿದ್ದು, ಭಾರತ ಯುವಕರ, ಮಹಿಳೆಯರ, ದೀನದಲಿತರ, ಹಿಂದುಳಿದವರ ಆಕಾಂಕ್ಷೆಗಳನ್ನು ಹೊಂದಿದೆ. ಅವುಗಳನ್ನು ಈಡೇರಿಸುವುದು ನಮ್ಮ ಕರ್ತವ್ಯ. ಬಡತನ ಮುಕ್ತ ಭಾರತ ನಿರ್ಮಾಣಕ್ಕೆ ಬದ್ಧರಾಗಿದ್ದೇವೆ ಎಂದರು.
ಇತ್ತೀಚೆಗೆ ಸಂಸತ್‍ನಲ್ಲಿ ಅಂಗೀಕರಿಸಲಾದ ಪೌರತ್ವ ಕಾಯ್ದೆ ಕುರಿತಂತೆ ಮಾತನಾಡಿದ ಮೋದಿ ಅವರು, ಧರ್ಮಾಧರಿತವಾಗಿ ಪಾಕಿಸ್ತಾನ ವಿಭಜನೆಗೊಂಡಿದೆ. ಅಲ್ಲಿನ ಅಲ್ಪಸಂಖ್ಯಾತರಾದ ಹಿಂದೂಗಳೂ, ಜೈನರು, ಸಿಖ್ಖರು ಧರ್ಮಾಚರಣೆ ಕಾರಣಕ್ಕಾಗಿ ಕಿರುಕುಳ ಅನುಭವಿಸುತ್ತಿದ್ದಾರೆ, ತಮ್ಮ ಮಕ್ಕಳ ಮೇಲಾಗುವ ಅತ್ಯಾಚಾರ ತಪ್ಪಿಸಲು ಭಾರತಕ್ಕೆ ಬರುತ್ತಾರೆ.
ಅವರಿಗೆ ರಕ್ಷಣೆ ಕೊಡುವುದು ನಮ್ಮ ಕರ್ತವ್ಯ. ಇದಕ್ಕಾಗಿ ಕಾನೂನು ತಂದರೆ ಕಾಂಗ್ರೆಸಿಗರು ಮತ್ತು ಅದರ ಮಿತ್ರ ಪಕ್ಷದವರು ವಿರೋಧ ಮಾಡುತ್ತಾರೆ. ಸಂಸತ್‍ನ್ನು ಗೌರವಿಸದೆ ಪ್ರತಿಭಟನೆ ನಡೆಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಭಯೋತ್ಪಾದನೆ ವಿರುದ್ಧ ಭಾರತ ಸಂಕಲ್ಪಿತ ಹೋರಾಟ ಕೈಗೆತ್ತಿಕೊಂಡಿದೆ. ಸಂವಿಧಾನ 370ರ ತಿದ್ದುಪಡಿ ಮೂಲಕ ಜಮ್ಮು ಕಾಶ್ಮೀರದಲ್ಲಿನ ಭಯೋತ್ಪಾದಕ ಕೃತ್ಯಗಳಿಗೆ ಕಡಿವಾಣ ಹಾಕಲಾಗಿದೆ ಎಂದು ಹೇಳಿದರು.
ಅಯೋಧ್ಯೆಯಲ್ಲಿ ಶಾಂತಿಯುತ ಮಾರ್ಗದ ಮೂಲಕ ಭವ್ಯ ರಾಮಮಂದಿರ ನಿರ್ಮಾಣ ಮಾಡುವ ಸಂಕಲ್ಪ ಈಡೇರುತ್ತಿದೆ. ಸಿದ್ದಗಂಗಾ ಮಠದಲ್ಲಿ ಡಾ.ಶಿವಕುಮಾರ ಸ್ವಾಮೀಜಿಗಳ ಅನುಪಸ್ಥಿತಿ ಶೂನ್ಯವನ್ನು ಆವರಿಸುವಂತೆ ಮಾಡಿದೆ. ಸಾಧು ಸಂತರ ಮಾರ್ಗದರ್ಶನದ ಮೇಲೆಯೇ ನಾವು ಮುನ್ನಡೆಯುತ್ತಿದ್ದೇವೆ. 21ನೇ ಶತಮಾನದ ಮೂರನೇ ದಶಕಕ್ಕೆ ಕಾಲಿಡುತ್ತಿದ್ದೇವೆ. ಸಿದ್ದಗಂಗಾದಂತಹ ಪುಣ್ಯ ಕ್ಷೇತ್ರಕ್ಕೆ ಆಗಮಿಸಿ ಇಲ್ಲಿಂದಲೇ ನಾನು ಈ ವರ್ಷದ ಕೆಲಸಗಳನ್ನು ಆರಂಭಿಸುತ್ತಿರುವುದು ಹೆಚ್ಚು ಸಂತೋಷ ತಂದಿದೆ ಎಂದರು.
ಆರಂಭದಲ್ಲಿ ಎಲ್ಲರಿಗೂ ಕನ್ನಡದಲ್ಲಿ ನಮಸ್ಕಾರ ಹೇಳಿದ ಪ್ರಧಾನಿ, ಹೊಸ ವರ್ಷದ ಶುಭಾಶಯವನ್ನು ಕನ್ನಡದಲ್ಲೇ ಹೇಳುವ ಮೂಲಕ ಜನಸ್ತೋಮದ ಚಪ್ಪಾಳೆ ಗಿಟ್ಟಿಸಿದರು.
ಸಿದ್ದಗಂಗೆಯ ಮಠಾಧೀಶರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಮಾತನಾಡಿ, ಮಠದ ಪರಂಪರೆ ಮತ್ತು ಹಿನ್ನೆಲೆ ಬಗ್ಗೆ ವಿವರಣೆ ನೀಡಿದರು. ಸಿದ್ದಗಂಗಾ ಶ್ರೀಗಳು, ಹಸಿವು, ಅನಕ್ಷರತೆ ಹೋಗಲಾಡಿಸಲು ಶ್ರಮಿಸಿದರು ಎಂದು ಹೇಳಿದರು.
ಪ್ರಧಾನಿಯವರ ಆಗಮನ ಅತ್ಯಂತ ಸಂತೋಷ ಹಾಗೂ ಸಡಗರ ಸಂಭ್ರಮವನ್ನುಂಟು ಮಾಡಿದೆ ಎಂದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಸದಾನಂದಗೌಡ, ಪ್ರಹ್ಲಾದ್ ಜೋಷಿ, ಸುರೇಶ್ ಅಂಗಡಿ, ಸಚಿವರಾದ ವಿ.ಸೋಮಣ್ಣ, ಜೆ.ಸಿ.ಮಾಧುಸ್ವಾಮಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಿದ್ದಗಂಗೆಯ ಮಠಾಧೀಶರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಮಾತನಾಡಿ, ಮಠದ ಪರಂಪರೆ ಮತ್ತು ಹಿನ್ನೆಲೆ ಬಗ್ಗೆ ವಿವರಣೆ ನೀಡಿದರು. ಸಿದ್ದಗಂಗಾ ಶ್ರೀಗಳು, ಹಸಿವು, ಅನಕ್ಷರತೆ ಹೋಗಲಾಡಿಸಲು ಶ್ರಮಿಸಿದರು ಎಂದು ಹೇಳಿದರು.
ಸಿದ್ದಗಂಗಾ ಮಠದಲ್ಲಿ ಮೋದಿ, ಇಲ್ಲಿದೆ ಪ್ರಧಾನಿ ಭಾಷಣದ ಹೈಲೈಟ್ಸ್
Reviewed by Space encyclopaedia
on
January 02, 2020
Rating:
Reviewed by Space encyclopaedia
on
January 02, 2020
Rating:

No comments: