ವಿದೇಶಿಗರ ಅಶ್ಲೀಲತೆಯ ಹೊಸ ವರ್ಷಾಚರಣೆಗೆ ಬ್ರೇಕ್!
ಕೊಪ್ಪಳ: ಗಂಗಾವತಿ ತಾಲೂಕಿನ ವೀರುಪಾಪುರಗಡ್ಡಿ ವಿದೇಶಿಗರ ಹಾಟ್ ಸ್ಪಾಟ್. ಹೊಸ ವರ್ಷದ ಸಂದರ್ಭದಲ್ಲಿ ಇಲ್ಲಿ ನಡೆಯುವ ಅನಧಿಕೃತ ಚಟುವಟಿಕೆಗೆ ಬ್ರೇಕ್ ಹಾಕಲು ಗಂಗಾವತಿ ಪೊಲೀಸರು ಮುಂದಾಗಿದ್ದಾರೆ.
ಹೊಸವರ್ಷಾಚರಣೆ ಸಂದರ್ಭಗಳಲ್ಲಿ ವೀರುಪಾಪುರ ಗಡ್ಡಿಯಲ್ಲಿರುವ ರೆಸಾರ್ಟ್ ಮಾಲೀಕರು ವಿದೇಶಿಗರಿಂದ ಹೆಚ್ಚಿನ ಹಣ ಪಡೆದು ಅನಧಿಕೃತ ಚಟುವಟಿಕೆಗೆ ಅವಕಾಶ ಮಾಡಿಕೊಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.
ಅಸಭ್ಯವಾಗಿ ವರ್ತಿಸುವುದಷ್ಟೆ ಅಲ್ಲದೆ, ಮಾದಕ ವಸ್ತುಗಳ ಸೇವನೆ ಮಾಡುತ್ತಾ, ಅಶ್ಲೀಲ ಪಾರ್ಟಿಗಳನ್ನು ಮಾಡುತ್ತಾ ಈ ಪ್ರದೇಶದಲ್ಲಿ ವಿದೇಶಿಗರು ಅಸಹ್ಯಕರವಾದ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ ಎನ್ನುವುದು ನಾಗರಿಕರ ದೂರಾಗಿತ್ತು.
ಈ ಹಿಂದೆ, ಈ ಭಾಗಗಳಲ್ಲಿ ಕಪಲ್ ಟೆಂಟ್ಗಳನ್ನು ಹಾಕಿಕೊಂಡು ವಿದೇಶಿಗರು ಅಸಭ್ಯವಾಗಿ ಹೊಸವರ್ಷ ಆಚರಿಸಿದ್ರು ಎಂದು ಸ್ಥಳೀಯರು ದೂರು ಸಲ್ಲಿಸಿದ್ದರು.
ಇನ್ನು ಕೆಲವೊಂದು ರೆಸಾರ್ಟ್ ಮಾಲೀಕರು ವಿದೇಶಿಗರ ಬಳಿ ದುಪ್ಪಟ್ಟು ಹಣ ಪಡೆದು ಮಾದಕವಸ್ತುಗಳನ್ನು ಪೂರೈಕೆ ಮಾಡುತ್ತಿದ್ದಾರೆ ಎನ್ನುವ ಆರೋಪವೂ ಇದೆ.
ಈ ಹಿನ್ನೆಲೆಯಲ್ಲಿ ಈ ವರ್ಷ ಪೊಲೀಸ್ ಇಲಾಖೆ ಎಚ್ಚೆತ್ತು ಕೊಂಡಿದ್ದು, ಯಾವುದೇ ಅಕ್ರಮ ಚಟುವಟಿಕೆ ಕಂಡು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ರೆಸಾರ್ಟ್ ಮಾಲೀಕರೆಲ್ಲಿರಿಗೂ ಖಡಕ್ ಸೂಚನೆ ನೀಡಿದೆ.
ರೆಸಾರ್ಟ್ ಮಾಲೀಕರೊಂದಿಗೆ ಸಭೆ ನಡೆಸಿದ ಗಂಗಾವತಿಯ ಡಿವೈಎಸ್ಪಿ ಬಿಪಿ ಚಂದ್ರಶೇಖರ್, ಕಾನೂನು ಮೀರಿ ನಡೆದುಕೊಂಡರೆ ಹಾಗೂ ಭಾರತೀಯ ಸಂಸ್ಕೃತಿಗೆ ದಕ್ಕೆಯಾಗುವ ರೀತಿ ಹೊಸವರ್ಷ ಆಚರಣೆ ಮಾಡಿದರೆ, ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಗಂಗಾವತಿ ತಾಲೂಕಿನ ವೀರುಪಾಪುರಗಡ್ಡಿ ವಿದೇಶಿಗರ ಅಶ್ಲೀಲತೆಯ ಹೊಸ ವರ್ಷಾಚರಣೆಗೆ ಬ್ರೇಕ್!
Reviewed by Space encyclopaedia
on
December 30, 2019
Rating:
Reviewed by Space encyclopaedia
on
December 30, 2019
Rating:

No comments: