Breaking News

test

ಜಸ್ಟ್‌ 6 ಸೆಕೆಂಡ್ಸ್‌..! 2 ಜೀವ ಹೋಗಿತ್ತು, ಆದ್ರೆ 240ಕ್ಕೂ ಹೆಚ್ಚು ಜೀವ ಉಳಿದಿತ್ತು..!

ಜಸ್ಟ್‌ 6 ಸೆಕೆಂಡ್ಸ್‌..! 2 ಜೀವ ಹೋಗಿತ್ತು, ಆದ್ರೆ 240ಕ್ಕೂ ಹೆಚ್ಚು ಜೀವ ಉಳಿದಿತ್ತು..!



ಸಮಯಪ್ರಜ್ಞೆ.. ಇದೊಂದು ಎಲ್ಲರಲ್ಲೂ ಇದ್ರೆ ಎಷ್ಟೋ ಯಡವಟ್ಟುಗಳು, ಅನಾಹುತಗಳು, ದುರಂತಗಳನ್ನ ತಪ್ಪಿಸಬಹುದೇನೋ. ಇದಕ್ಕೊಂದು ಫ್ರೆಶ್‌ ಎಕ್ಸಾಂಪಲ್‌ ಅಮೆರಿಕಾದ ಟೆಕ್ಸಾಸ್‌ನ ಫೋರ್ಟ್‌ವರ್ತ್‌ ಪ್ರದೇಶದ ಚರ್ಚ್‌ನಲ್ಲಿ ನಡೆದಿರುವ ಘಟನೆ. ಕೇವಲ ಆರೇ ಆರು ಸೆಕೆಂಡ್‌ನಲ್ಲಿ ಆ ಚರ್ಚ್‌ನಲ್ಲಿ ಪ್ರೇಯರ್‌ಗೆ ಬಂದಿದ್ದ ಇಬ್ಬರ ಜೀವ ಹೋಗಿತ್ತು. ಒಂದ್ವೇಳೆ ಅಲ್ಲಿದ್ದ 240ಕ್ಕೂ ಹೆಚ್ಚು ಜನರಲ್ಲಿ ಆ ಒಬ್ಬ ವ್ಯಕ್ತಿ ಸಮಯಪ್ರಜ್ಞೆ ತೋರಿಸದೇ ಇದ್ದಿದ್ರೆ ಆವತ್ತು ಅದೇ ಜಾಗದಲ್ಲಿ ಇನ್ನಷ್ಟು ಮಂದಿಯ ಜೀವ ಹೋಗಿ ರಕ್ತದೋಕುಳಿ ಹರಿದುಬಿಡ್ತಿತ್ತು.
ಚರ್ಚ್‌ಗೆ ಬಂದಿದ್ದವರ ಮಧ್ಯೆಯೇ ಇದ್ದ ರಾಕ್ಷಸ..!
ಇದು ನಿನ್ನೆ ನಡೆದಿರುವ ಘಟನೆ. ಪೋರ್ಟ್‌ವರ್ತ್‌ ಚರ್ಚ್‌ನಲ್ಲಿ ಸಭೆ ನಡೀತಿತ್ತು. ಸುಮಾರು 240ಕ್ಕೂ ಹೆಚ್ಚು ಮಂದಿ ಇದ್ರಲ್ಲಿ ಭಾಗಿಯಾಗಿದ್ರು.

ಚರ್ಚ್‌ನ ಫಾದರ್ ಎಲ್ಲರನ್ನ ಉದ್ದೇಶಿಸಿ ಮಾತ್ನಾಡ್ತಿದ್ರು. ಇದು ತಮ್ಮ ಅಭಿಪ್ರಾಯ, ಕಷ್ಟ, ಆಧ್ಯಾತ್ಮಿಕ ವಿಚಾರಗಳನ್ನ ಹಂಚಿಕೊಳ್ಳೋ ಕಾರ್ಯಕ್ರಮವಾಗಿತ್ತು. ಕಾರ್ಯಕ್ರಮದ ನೇರಪ್ರಸಾರ ಕೂಡ ನಡೀತಿತ್ತು. ಈ ವೇಳೆ ಏಕಾಏಕಿ ಓರ್ವ ಆಗಂತುಕ ಒಳಗಡೆ ಬಂದಿದ್ದ. ಬಂದವನೇ ಬಟ್ಟೆ ಒಳಗಡೆಯಿಂದ ರೈಫಲ್ ತೆಗೆದು ನೆರೆದಿದ್ದ ಇಬ್ಬರ ಮೇಲೆ ಶೂಟ್‌ ಮಾಡಿಬಿಟ್ಟಿದ್ದ.
ಆರೇ ಆರು ಸೆಕೆಂಡ್‌ನಲ್ಲಿ ರಿಯಾಕ್ಟ್‌ ಆಗಿದ್ದ ಸೆಕ್ಯುರಿಟಿಗಾರ್ಡ್‌..!
ಶೂಟೌಟ್‌ ಆಗ್ತಿದ್ದಂತೆ ಎಲ್ಲರಿಗೂ ಗಾಬರಿ, ಆತಂಕ. ಎಲ್ಲರೂ ತಮ್ಮ ಚೈರ್‌ ಕೆಳಗೆ ತೂರಿಕೊಂಡು ಪ್ರಾಣ ರಕ್ಷಣೆಗೆ ಮುಂದಾಗಿದ್ರು. ಫಾದರ್‌ ಕೂಡ ನೆಲದಲ್ಲಿ ಮಲಗಿಬಿಟ್ರು. ಆದ್ರೆ ಸೌಂಡ್‌ ಕೇಳ್ತಿದ್ದಂತೆ ಆರೇ ಆರು ಸೆಕೆಂಡ್‌ನಲ್ಲಿ ರಿಯಾಕ್ಟ್‌ ಆಗಿದ್ದು ಚರ್ಚ್‌ನ ರಕ್ಷಣೆಗೆ ಅಂತ ಇದ್ದ ಸೆಕ್ಯುರಿಟಿ ಸರ್ವಿಸಸ್‌ನ ಗನ್‌ಮ್ಯಾನ್‌. ಕೂಡಲೇ ತನ್ನ ಗನ್‌ ಹಿಡಿದು ಮುನ್ನುಗಿದವನೇ ಸೀದಾ ಸೀದಾ ರೈಫಲ್‌ ಹಿಡಿದು ಜನರ ಪ್ರಾಣ ತೆಗೆಯೋಕೆ ಮುಂದಾಗಿದ್ದವನ ಮೇಲೆ ಶೂಟ್‌ ಮಾಡಿಬಿಟ್ಟ. ಸೆಕ್ಯುರಿಗಾರ್ಡ್‌ ಸಿಡಿಸಿದ ಗುಂಡಿಗೆ ಆಗಂತುಕ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ.
ಒಂದು ವೇಳೆ ಚರ್ಚ್‌ನ ಸೆಕ್ಯುರಿಟಿ ಗಾರ್ಡ್‌ ಆ ಕ್ಷಣಕ್ಕೆ ಸರಿಯಾಗಿ ರಿಯಾಕ್ಟ್‌ ಮಾಡದೇ ಇದ್ದಿದ್ರೆ ಖಂಡಿತಾ ಮತ್ತಷ್ಟು ಜೀವಗಳು ಹೋಗ್ತಿದ್ವು. ಮತ್ತಷ್ಟು ದೊಡ್ಡ ದುರಂತ ನಡೀತಿತ್ತು. ಇನ್ನು ಆಗಂತುಕನನ್ನ ಹೊಡೆದುರುಳಿಸಿದ ಸೆಕ್ಯುರಿಟಿ ಗಾರ್ಡ್‌ ಅಮೆರಿಕಾದ ಗುಪ್ತಚರ ಸಂಸ್ಥೆ ಎಫ್‌ಬಿಐನ ಮಾಜಿ ಏಜೆಂಟ್‌ ಅನ್ನೋ ಮಾಹಿತಿಯೂ ಲಭ್ಯವಾಗಿದೆ. ಬಹುಶಃ ಇದೇ ಕಾರಣದಿಂದಾಗಿ ಆತ ಆ ಆರು ಸೆಕೆಂಡ್‌ಗಳಲ್ಲಿ ಸಮಯಪ್ರಜ್ಞೆ ಉಪಯೋಗಿಸಿ ಅಷ್ಟುಮಂದಿಯ ಪ್ರಾಣ ಉಳಿಸೋಕೆ ಸಾಧ್ಯವಾಯ್ತು.
ಜಸ್ಟ್‌ 6 ಸೆಕೆಂಡ್ಸ್‌..! 2 ಜೀವ ಹೋಗಿತ್ತು, ಆದ್ರೆ 240ಕ್ಕೂ ಹೆಚ್ಚು ಜೀವ ಉಳಿದಿತ್ತು..! ಜಸ್ಟ್‌ 6 ಸೆಕೆಂಡ್ಸ್‌..! 2 ಜೀವ ಹೋಗಿತ್ತು, ಆದ್ರೆ 240ಕ್ಕೂ ಹೆಚ್ಚು ಜೀವ ಉಳಿದಿತ್ತು..! Reviewed by Space encyclopaedia on December 30, 2019 Rating: 5

No comments:

Powered by Blogger.