'ಹೌದು ಹುಲಿಯಾ' ನಂತ್ರ, ಇದೀಗ.. ವಿದ್ಯಾರ್ಥಿಯೊಬ್ಬ ಬರೆದ 'ಹೌದು ಹುಲಿಯ ಉತ್ತರ' ವೈರಲ್
ಸ್ಪೆಷಲ್ ಡೆಸ್ಕ್ : ಇತ್ತೀಚೆಗೆ ನಡೆದ ಕಾಗವಾಡ ವಿಧಾನಸಭಾ ಉಪ ಚುನಾವಣಾ ಪ್ರಚಾರ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಭಾಷಣದ ವೇಳೆಯಲ್ಲಿ, ವ್ಯಕ್ತಿಯೊಬ್ಬರು ಹೇಳಿದ್ದ ಹೌದು ಹುಲಿಯಾ ಡೈಲಾಗ್ ಸಖತ್ ವೈರಲ್ ಆಗಿತ್ತು. ಟಿಕ್ ಟಾಕ್ ಸೇರಿದಂತೆ ಅನೇಕ ಜನಪ್ರೀಯ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ಸದ್ದು ಮಾಡಿತ್ತು. ನಿಖಿಲ್ ಎಲ್ಲಿದ್ದೀಯಪ್ಪಾ ನಂತ್ರ, ಹೌದು ಹುಲಿಯಾ ಟ್ರೆಂಡ್ ಸೃಷ್ಠಿಸಿತ್ತು. ಇದೀಗ ಇದೇ ಸಾಲಿನಲ್ಲಿ ವಿದ್ಯಾರ್ಥಿಯೊಬ್ಬ ಪರೀಕ್ಷೆಯಲ್ಲಿ ಬರದೆ ಹೌದು ಹುಲಿಯಾ ಉತ್ತರ ಪತ್ರಿಕೆ ಸಖತ್ ವೈರಲ್ ಆಗಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಕಾಗವಾಡ ವಿಧಾನಸಭಾ ಉಪ ಚುನಾವಣೆಯ ಪ್ರಚಾರದ ವೇಳೆ ಭಾಷ ಮಾಡುತ್ತಿದ ಸಮಯದಲ್ಲಿ ಹೌದು ಹುಲಿಯಾ ಎಂಬುದಾಗಿ ಐನಾಪುರದ ಪೀರಪ್ಪ ತುಕ್ಕಪ್ಪ ಕಟ್ಟಿಮನಿ ಕೂಗಿದ್ದರು. ಈ ಮೂಲಕ ಅವರು ಸಖತ್ ಫೇಮಸ್ ಕೂಡ ಆಗಿದ್ದರು.
ರಾಜ್ಯಶಾಸ್ತ್ರ ವಿಷಯಕ್ಕೆ ಸಂಬಂಧಿಸಿದಂತೆ ನೀಡಲಾಗಿದ್ದ ಕಿರು ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಕರ್ನಾಟಕದ ರಾಜಕೀಯ ನಾಯಕರೊಬ್ಬರ ಬಗ್ಗೆ ಟಿಪ್ಪಣಿ ಬರೆಯಿರಿ ಎಂಬುದಾಗಿ ನೀಡಲಾಗಿರುವ ಪ್ರಶ್ನೆಗೆ ವಿದ್ಯಾರ್ಥಿಯೊಬ್ಬರು ಹೌದು ಹುಲಿಯಾ ಎಂಬ ಉದ್ಗಾರದ ಉತ್ತರವನ್ನು ಬರೆದಿದ್ದಾನೆ. ಈ ಉತ್ತರ ಪತ್ರಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಕೂಡ ಆಗಿದೆ.
ಹೀಗಿದೆ.. ವಿದ್ಯಾರ್ಥಿ ಬರೆದ 'ಹೌದು ಹುಲಿಯಾ' ಉತ್ತರ ಪತ್ರಿಕೆಯಲ್ಲಿ ಉತ್ತರ
ಕರ್ನಾಟಕದ ಒಬ್ಬ ರಾಜಕೀಯ ನಾಯಕರು ಎಂದರೇ, ನಮ್ಮೆಲ್ಲರ ಜನ ಮೆಚ್ಚಿನ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯನವರು. ಇವರು 2014ರಿಂದ 2018ರ ವರೆಗೆ ಮುಖ್ಯಮಂತ್ರಿಯಾಗಿದ್ದರು. ಇವರು ಕಾಂಗ್ರೆಸ್ ಪಕ್ಷದ ವಿಪಕ್ಷ ನಾಯಕರು ಇವರು. 3 ಲರ್ಷ ಸಿಎಂ ಆಗಿದ್ದರು. ಸಿಎಂ ಆಗಿದ್ದಾಗ ಎಲ್ಲರಿಗೂ ಅನ್ನಭಾಗ್ಯ ಮತ್ತು ಕ್ಷೀರಭಾಗ್ಯ ಮತ್ತು ಸೈಕಲ್ ಗಳನ್ನು ನೀಡಿದರು.
ಅಂಗನವಾಡಿ ಮಕ್ಕಳಿಗೆ ದಿನಕ್ಕೆ ಒಂದು ಹೊತ್ತು ಬೆಳಿಗ್ಗೆ ಹಾಲು ನೀಡಿದರು. ಇವರು ಮತ್ತೆ 2018ರಲ್ಲಿ ಸಿಎಂ ಆಗುತ್ತಿದ್ದರು. ಆದರೇ ಇದಕ್ಕೆ ಒಪ್ಪದ ಇವರು ಸಿಎಂ ಆಗಲಿಲ್ಲ. ಆದ್ದರಿಂದ ಜೆಡಿಎಸ್ ಮತ್ತು ಕಾಂಗ್ರೆಸ್ ಸೇರಿ ಮೈತ್ರಿ ಸರ್ಕಾರ ರಚಿಸಿದರು. ಅದ್ದರಿಂದ ಇವರಿಗೆ ಏನೂ ಲಾಭವಾಗಲಿಲ್ಲ. ಮೈತ್ರಿ ಸರ್ಕಾರ ಅಸ್ಥಿತ್ವಕ್ಕೆ ಬಂದ 18 ತಿಂಗಳಿಗೇ ಬಿದ್ದು ಹೋಯಿತು. ಕಾರಣ ಕಾಂಗ್ರೆಸ್ ನ 10 ಜನರು ರಾಜೀನಾಮೆ ಕೊಟ್ಟರು. ಹೀಗಾಗಿ ಡಿಸೆಂಬರ್ 5ರಂದು ಬೈ ಎಲೆಕ್ಷನ್ ಆಯಿತು.
ಈ ಚುನಾವಣೆಯಲ್ಲಿ 15 ಕ್ಷೇತ್ರಗಳಲ್ಲಿ 15 ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದಿದ್ದರು. ಆದ್ರೇ ಇದು ಸಾಧ್ಯವಾಗಲಿಲ್ಲ. ಅವರು ನಾನು ಮತ್ತೆ ಸಿಎಂ ಆಗುತ್ತೇನೆ ಎಂಬುದಾಗಿ ಆಶಯ ವ್ಯಕ್ತ ಪಡಿಸಿದ್ದು, ಸಾಧ್ಯವಾಗಲಿಲ್ಲ. ಆದ್ರೇ ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು. ಸಿಎಂ ಆಗುತ್ತಾರೆ.
ಹೌದು ಹುಲಿಯಾ
ಜೈ ಸಿದ್ದರಾಮಯ್ಯ
ಜೈ ಸಿದ್ದರಾಮಯ್ಯ
ಈ ರೀತಿಯಾಗಿ ಕರ್ನಾಟಕದ ರಾಜಕೀಯ ನಾಯಕರೊಬ್ಬರ ಬಗ್ಗೆ ಟಿಪ್ಪಣಿ ಬರೆಯಿರಿ ಎಂಬ ರಾಜಶಾಸ್ತ್ರ ಕಿರು ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಸಿದ್ದರಾಮಯ್ಯನವರ ಬಗ್ಗೆಯೇ ಉತ್ತರಿಸಿದ್ದಾನೆ. ಜೊತೆಗೆ ಟ್ರೆಂಡಿಂಗ್ ಸೃಷ್ಠಿಸಿದ್ದ ಹೌದು ಹುಲಿಯಾ ಎಂಬುದಾಗಿ ಉತ್ತರ ಪತ್ರಿಕೆಯಲ್ಲಿ ನಮೂದಿಸಿದ್ದಾನೆ. ಈ ಮೂಲಕ ಇದೀಗ ಹೌದು ಹುಲಿಯಾ ಉತ್ತರ ಪತ್ರಿಕೆಯಲ್ಲೂ ವೈರಲ್ ಆಗಿದೆ.
'ಹೌದು ಹುಲಿಯಾ' ನಂತ್ರ, ಇದೀಗ.. ವಿದ್ಯಾರ್ಥಿಯೊಬ್ಬ ಬರೆದ 'ಹೌದು ಹುಲಿಯ ಉತ್ತರ' ವೈರಲ್
Reviewed by Space encyclopaedia
on
December 21, 2019
Rating:
Reviewed by Space encyclopaedia
on
December 21, 2019
Rating:


No comments: