ಕಿಚ್ಚು ಹಚ್ಚಿಸುವಂತಿದೆ ಕೆಜಿಎಫ್ ಚಾಪ್ಟರ್ -2 ಪೋಸ್ಟರ್..!
ಕೆಜಿಎಫ್.. ಕನ್ನಡ ಇಂಡಸ್ಟ್ರಿಯನ್ನು ಇಡೀ ವಿಶ್ವಕ್ಕೆ ಪರಿಚಯಿಸಿ ಕೊಟ್ಟ ಸಿನಿಮಾ. ಇವತ್ತಿಗೆ 'ರಾಕಿ ಭಾಯ್' ಜನರೆದುರಿಗೆ ಬಂದು ವರ್ಷವಾಯ್ತು. ಈ ಸಂಭ್ರಮದ ನಡುವಲ್ಲೇ ಚಿತ್ರತಂಡ ಕೆಜಿಎಫ್ ಚಾಪ್ಟರ್- 2 ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಗೆ ಮುಂದಾಗಿತ್ತು. ಇದೀಗ ಆ ಕ್ಷಣ ಬಂದಿದೆ. ರಾಕಿ ಭಾಯ್ ಅವತಾರ ಫ್ಯಾನ್ಸ್ಗಳಲ್ಲಿ ಅಭಿಮಾನದ ಕಿಚ್ಚು ಹಚ್ಚಿಸಿದೆ.
ಇಂಡಸ್ಟ್ರಿ ಆಚೆಗೂ ಪೋಸ್ಟರ್ ಕಾಂಪಿಟೇಷನ್..!
ಈ ಪೋಸ್ಟರ್ ಮೂಲಕ ಮುಂದಿನ ಕಥೆಯ ಎಳೆಯನ್ನು ಟೀಂ ಬಿಚ್ಚಿಟ್ಟಿದೆ. ರಾಕಿ.. ರಾಕಿ ಭಾಯ್ ಆದ ನಂತರ ನರಾಚಿ ಸಾಮ್ರಾಜ್ಯವನ್ನು ಹೇಗೆ ಎತ್ತಿ ನಿಲ್ಲಿಸ್ತಾರೆ..? ಅನ್ನೋದರ ಸೂಚಕವಾಗಿದೆ. ರಾಕಿ ಭಾಯ್ ಲುಕ್ ಪೊಗರದಸ್ತ್ ಆಗಿದೆ. ಈಗಾಗಲೇ ಎಲ್ಲೆಡೆಯಿಂದ ಪೋಸ್ಟರ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗ್ತಿದೆ.
ಕಿಚ್ಚು ಹಚ್ಚಿಸುವಂತಿದೆ ಕೆಜಿಎಫ್ ಚಾಪ್ಟರ್ -2 ಪೋಸ್ಟರ್..!
Reviewed by Space encyclopaedia
on
December 21, 2019
Rating:
Reviewed by Space encyclopaedia
on
December 21, 2019
Rating:

No comments: