ಟೆಕ್ಸಾಸ್: ಅಮೆರಿಕದ ದೊಡ್ಡ ನಗರಗಳ ಪೈಕಿ ಒಂದಾದ ಟೆಕ್ಸಾಸ್ ನಗರಕ್ಕೆ ಏಳು ತಿಂಗಳ ಮಗು ವಿಲಿಯಮ್ ಚಾರ್ಲ್ಸ್ ಮೇಯರ್ ಆಗಿ ಆಯ್ಕೆಯಾಗಿದೆ. ಈ ಮೂಲಕ ಅಮೆರಿಕದಲ್ಲಿ ಅತ್ಯಂತ ಸಣ್ಣ ವಯಸ್ಸಿಗೆ ಮೇಯರ್ ಪಟ್ಟ ಅಲಂಕರಿಸಿದ ಶ್ರೇಯಕ್ಕೆ ಚಾರ್ಲ್ಸ್ ಪಾತ್ರವಾಗಿದೆ.
ವೈಟ್ ಹಾಲ್ ಕಮ್ಯುನಿಟಿ ಸೆಂಟರ್ನಲ್ಲಿ ಮೇಯರ್ ಆಗಿ ಚಾರ್ಲ್ಸ್ ಪ್ರಮಾಣ ವಚನ ಸ್ವೀಕರಿಸಿತು. ಕಪ್ಪು ಬಣ್ಣದ ಸೂಟು ಬೂಟು ಧರಿಸಿ ಕ್ಯೂಟಾಗಿ ಕಾಣುತ್ತಿದ್ದ ಚಾರ್ಲ್ಸ್ ನೆರೆದಿದ್ದವರ ಹೃದಯ ಕದ್ದಿದೆ.
ಮೇಯರ್ ಚಾರ್ಲಿ ಎಂದು ಜನಪ್ರಿಯವಾಗಿರುವ ಚಾರ್ಲ್ಸ್, ಗ್ರಿಮ್ಸ್ ಕೌಂಟಿಯ ಸ್ಥಳೀಯ ಸಮುದಾಯಗಳಿಗೆ ಸೇವೆ ಸಲ್ಲಿಸಲು ಅಕ್ಟೋಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಗೆದ್ದಿದ್ದರು.
ಮೇಯರ್ ಚಾರ್ಲಿ ಎಂದು ಜನಪ್ರಿಯವಾಗಿರುವ ಚಾರ್ಲ್ಸ್, ಗ್ರಿಮ್ಸ್ ಕೌಂಟಿಯ ಸ್ಥಳೀಯ ಸಮುದಾಯಗಳಿಗೆ ಸೇವೆ ಸಲ್ಲಿಸಲು ಅಕ್ಟೋಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಗೆದ್ದಿದ್ದರು.
'ಮೇಕ್ ಅಮೆರಿಕ ಕಿಡ್ ಗ್ರೇಟ್ ಅಗೇನ್' ಎಂಬ ಧ್ಯೇಯವಾಕ್ಯದೊಂದಿಗೆ ಸಾಕು ಪೋಷಕರಾದ ಚಾಡ್ ಮತ್ತು ನ್ಯಾನ್ಸಿ ಮೆಕ್‌ಮಿಲಿಯನ್ ಪೋಡಿಯಂ ಮೇಲೆ ನಿಂತಿದ್ದ ಚಾರ್ಲ್ಸ್ ಗೆ ನೆರೆದವರು ಶುಭ ಹಾರೈಸಿದ್ದಾರೆ.
ಸ್ಥಳೀಯ ಟಿವಿ ಚಾನೆಲ್ ಕೆಬಿಟಿಎಕ್ಸ್ ಪ್ರಕಾರ, ಪ್ರತಿವರ್ಷ ಮೇಯರ್ ಸ್ಥಾನವನ್ನು ವೈಟ್‌ಹಾಲ್ ಸ್ವಯಂಸೇವಕ ಅಗ್ನಿಶಾಮಕ ವಿಭಾಗದ ಬಿಬಿಕ್ಯು ನಿಧಿಸಂಗ್ರಹದಲ್ಲಿ ಹರಾಜು ಮಾಡಲಾಗುತ್ತದೆ. ಈ ವರ್ಷ, ಚಾರ್ಲಿ ಅತಿ ಹೆಚ್ಚು ಬಿಡ್ದಾರನಾಗಿದ್ದನು. ಈ ಮೂಲಕ ಚಾರ್ಲಿ ಅಮೆರಿಕದ ಅತ್ಯಂತ ಕಿರಿಯ ಮೇಯರ್ ಆಗಿ ಆಯ್ಕೆ ಆಗಿದ್ದಾನೆ ಎಂದು ವರದಿ ತಿಳಿಸಿದೆ.-(ಏಜೆನ್ಸೀಸ್)
ಏಳು ತಿಂಗಳ ಮಗು ಟೆಕ್ಸಾಸ್ ನಗರ ಮೇಯರ್: ನಂಬಲು ಅಸಾಧ್ಯವಾದರೂ ಸತ್ಯ
Reviewed by Space encyclopaedia
on
December 19, 2019
Rating:
Reviewed by Space encyclopaedia
on
December 19, 2019
Rating:

No comments: