ಜನವರಿ 3 ರಂದು ರಾಜ್ಯಕ್ಕೆ ಮೋದಿ: ರೈತರ ಸಮಾವೇಶದಲ್ಲಿ ಭಾಗಿ
ಪ್ರಧಾನಿ ನರೇಂದ್ರ ಮೋದಿ ಜನವರಿಗೆ 3 ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಜನವರಿ 3 ರಂದು ಬೆಂಗಳೂರಿನಲ್ಲಿ ಅಥವಾ ತುಮಕೂರಿನಲ್ಲಿ ರೈತರ ಸಮಾವೇಶ ನಡೆಯಲಿದ್ದು ಈ ಸಮಾವೇಶದಲ್ಲಿ ಮೋದಿ ಭಾಗಿಯಾಗಲಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ ಮೋದಿ ರೈತರ ಸಮಾವೇಶ ಆಯೋಜಿಸುವ ಕುರಿತು ಚರ್ಚೆ ನಡೆಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಪೂರ್ವ ತಯಾರಿಗೆ ಸೂಚನೆ ನೀಡಿದ್ದು ತುಮಕೂರು ಅಥವಾ ಬೆಂಗಳೂರಿನಲ್ಲಿ ಜನವರಿ 3ರಂದು ರೈತರ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ ಮೋದಿ ಭಾಗಿಯಾಗಲಿದ್ದಾರೆ ಎಂದು ಹೇಳಲಾಗಿದೆ.
ಜನವರಿ 3 ರಂದು ರಾಜ್ಯಕ್ಕೆ ಮೋದಿ: ರೈತರ ಸಮಾವೇಶದಲ್ಲಿ ಭಾಗಿ
Reviewed by Space encyclopaedia
on
December 19, 2019
Rating:
Reviewed by Space encyclopaedia
on
December 19, 2019
Rating:

No comments: