ಏಕದಿನ ಪಂದ್ಯ, ವೆಸ್ಟ್ ಇಂಡೀಸ್ಗೆ ಭರ್ಜರಿ ಗೆಲುವು
ಇಂದು ನಡೆದ ಭಾರತದ ವಿರುದ್ಧದ ಏಕದಿನ ಪಂದ್ಯದಲ್ಲಿ ಪ್ರವಾಸಿ ತಂಡ ವೆಸ್ಟ್ ಇಂಡಿಸ್ ಭರ್ಜರಿ ಜಯ ಗಳಿಸಿದೆ. ಭಾರತ ನೀಡಿದ್ದ 287ರನ್ಗಳ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್, ಎಸ್ ಡಿ ಹೋಪ್ ಹಾಗೂ ಎಸ್ಒ ಹಿಡ್ಮೇಯರ್ ಭರ್ಜರಿ ಶತಕಗಳ ಸಹಾಯದಿಂದ ಇನ್ನೂ 13 ಎಸೆತಗಳು ಬಾಕಿ ಇರುವಂತೆಯೇ ಕೇವಲ 2 ವಿಕೆಟ್ ಕಳೆದುಕೊಂಡು 291ರನ್ಗಳನ್ನು ಬಾರಿಸಿ ಭರ್ಜರಿ ಜಯ ದಾಖಲಿಸಿತು.
ಇನ್ನು ಮೊದಲು ಬ್ಯಾಟ್ ಮಾಡಿದ್ದ ಟೀಂ ಇಂಡಿಯಾ 50 ಓವರ್ಗಳಲ್ಲಿ 8 ವಿಕೆಟ್ಗಳನ್ನು ಕಳೆದುಕೊಂಡು 287ರನ್ಗಳನ್ನು ಗಳಿಸಿತ್ತು.
ಮೊದಲು ಬ್ಯಾಟ್ ಮಾಡಿದ ಕೊಹ್ಲಿ ಪಡೆ, ಆರಂಭದಲ್ಲಿ ಕೆ.ಎಲ್ ರಾಹುಲ್ (6), ಕ್ಯಾಪ್ಟನ್ ವಿರಾಟ್ ಕೊಹ್ಲಿ(4) ವಿಕೆಟ್ಗಳನ್ನು ಆರಂಭದಲ್ಲೇ ಕಳೆದುಕೊಂಡರೂ ನಂತರ ಬ್ಯಾಟ್ ಮಾಡಿದ ರೋಹಿತ್ ಶರ್ಮಾ (36), ಶ್ರೇಯಸ್ ಅಯ್ಯರ್ (70), ರಿಷಭ್ (71) ಪಂತ್, ಕೇದಾರ್ ಜಾಧವ್ (40), ರವೀಂದ್ರ ಜಡೇಜಾ (21) ಸಹಾಯದಿಂದ 287 ರನ್ ಗಳಿಸಲು ಶಕ್ತವಾಯಿತು.
ಇನ್ನು ವಿಂಡೀಸ್ ಪರ 10 ಓವರ್ಗಳಲ್ಲಿ 3 ಮೇಡನ್ ಸೇರಿದಂತೆ 46 ರನ್ ನೀಡಿ 2 ವಿಕೆಟ್ ಗಳಿಸಿದ ಕಾಟ್ರೆಲ್ ಯಶಸ್ವೀ ಬೌಲರ್ ಎನಿಸಿಕೊಂಡರು.
ನಂತರ ಬ್ಯಾಟಿಂಗ್ ಆರಂಭಿಸಿದ ವೆಸ್ಟ್ ಇಂಡೀಸ್ ಪ್ರಾರಂಭದಲ್ಲಿಯೇ ಆಯಂಬ್ರಿಸ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದ್ರೆ ನಂತರ ಬಂದ ಹಿಟ್ಮೇಯರ್ ವೇಗದ ಆಟ ಆಡುತ್ತ 106 ಎಸೆತಗಳಲ್ಲಿ 139ರನ್ ಗಳಿಸಿ ಔಟ್ ಆದರು. ಮೊಹಮ್ಮದ್ ಶಮಿ ಎಸೆತದಲ್ಲಿ ಶ್ರೇಯಸ್ ಅಯ್ಯರ್ಗೆ ಕ್ಯಾಚ್ ನೀಡಿ ಹಿಟ್ಮೇಯರ್ ಔಟ್ ಆದರು. ಇನ್ನೊಂದೆಡೆ ಪ್ರಾರಂಬದಿಂದಲೂ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡುತ್ತ ಬಂದ ಹೋಪ್, 151 ಎಸೆತಗಳಲ್ಲಿ 102 ರನ್ ಗಳಿಸಿ ನಾಟ್ಔಟ್ ಆಗಿ ಉಳಿದರು
ಏಕದಿನ ಪಂದ್ಯ, ವೆಸ್ಟ್ ಇಂಡೀಸ್ಗೆ ಭರ್ಜರಿ ಗೆಲುವು
Reviewed by Space encyclopaedia
on
December 15, 2019
Rating:
Reviewed by Space encyclopaedia
on
December 15, 2019
Rating:


No comments: