Breaking News

test

ಡಿಸಿಎಂ ಲಕ್ಷ್ಮಣ್ ಸವದಿಗೆ 'ಗುಡ್ ನ್ಯೂಸ್'

ಡಿಸಿಎಂ ಲಕ್ಷ್ಮಣ್ ಸವದಿಗೆ 'ಗುಡ್ ನ್ಯೂಸ್' : ಉಪಮುಖ್ಯಮಂತ್ರಿಯಾಗಿ ಮುಂದುವರೆಸುವುದಾಗಿ ಹೈಕಮಾಂಡ್ ಅಭಯ


ಬೆಂಗಳೂರು : ಡಿಸಿಎಂ ಲಕ್ಷ್ಮಣ್ ಸವದಿ ಅವರಿಗೆ ಬಿಜೆಪಿ ಹೈಕಮಾಂಡ್ ಸಿಹಿಸುದ್ದಿ ನೀಡಿದೆ. ಅಲ್ಲದೇ, ಉಪಮುಖ್ಯಮಂತ್ರಿಯಾಗಿ ಮುಂದುವರೆಸುವುದಾಗಿ ಅಭಯ ನೀಡಿದೆ.

ಲಕ್ಷ್ಮಣ್ ಸವದಿ ಅವರು ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಇದಕ್ಕೂ ಮುನ್ನ ಬೆಂಗಳೂರಿನಲ್ಲಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ, ಸಿಎಂ ಯಡಿಯೂರಪ್ಪ ಅವರು ವಿಧಾನಪರಿಷತ್ ಗೆ ಆಯ್ಕೆ ಮಾಡುವುದಾಗಿ ತಿಳಿಸಿದ್ದರು. ಲಕ್ಷ್ಮಣ್ ಸವದಿ ಅವರು ಡಿಸಿಎಂ ಆಗಿ ಮುಂದುವರೆಯಬೇಕಾದರೆ ಫೆಬ್ರವರಿಯೊಳಗೆ ಶಾಸನಸಭೆಗೆ ಆಯ್ಕೆಯಾಗಲೇ ಬೇಕಾದ ಅನಿವಾರ್ಯತೆ ಇದೆ. ಇನ್ನು ಕಾಂಗ್ರೆಸ್ ನ ರಿಜ್ವಾನ್ ಅರ್ಷದ್ ಶಾಸಕರಾಗಿ ಆಯ್ಕೆಯಾಗಿರುವ ಕಾರಣ ವಿಧಾನ ಪರಿಷತ್ ನಲ್ಲಿ ಒಂದು ಸ್ಥಾನ ತೆರವಾಗಿದೆ. ಈ ಸ್ಥಾನಕ್ಕೆ ಲಕ್ಷ್ಮಣ್ ಸವದಿ ಆಯ್ಕೆ ಮಾಡಲು ಬಿಜೆಪಿ ನಿರ್ಧರಿಸಿದೆ ಎನ್ನಲಾಗಿದೆ.
ಇನ್ನು ಯಡಿಯೂರಪ್ಪ ಅವರನ್ನು ಭೇಟಿಯಾದ ಬಳಿಕ ದೆಹಲಿಗೆ ತೆರಳಿದ ಲಕ್ಷ್ಮಣ್ ಸವದಿ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿದರು. ಈ ವೇಳೆ, ಅಮಿತ್ ಶಾ ಕೂಡ ಲಕ್ಷ್ಮಣ್ ಸವದಿ ಅವರನ್ನು ಡಿಸಿಎಂ ಆಗಿ ಮುಂದುವರೆಸುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ

ಡಿಸಿಎಂ ಲಕ್ಷ್ಮಣ್ ಸವದಿಗೆ 'ಗುಡ್ ನ್ಯೂಸ್' ಡಿಸಿಎಂ ಲಕ್ಷ್ಮಣ್ ಸವದಿಗೆ 'ಗುಡ್ ನ್ಯೂಸ್' Reviewed by Space encyclopaedia on December 15, 2019 Rating: 5

No comments:

Powered by Blogger.