Breaking News

test

ಆಗಸದಲ್ಲಿ ಟ್ರಾಫಿಕ್ ಜಾಮ್....¶¶

ಆಗಸದಲ್ಲಿ ಟ್ರಾಫಿಕ್ ಜಾಮ್..?
ಟ್ರಾಫಿಕ್ ಜಾಮ್ ಆಗುವುದು ಬೆಂಗಳೂರಿಗರಿಗೆ ಹೊಸದೇನಲ್ಲ. ಇಲ್ಲಿಗೆ ಬರುವ ಅನೇಕ ಮಂದಿ ಈ ಜಾಮ್‌ನಿಂದ ಬೇಸತ್ತು ಹೋಗಿರುತ್ತಾರೆ. ಇನ್ನು ದೆಹಲಿಯಂತಹ ನಗರಗಳಲ್ಲೂ ಟ್ರಾಫಿಕ್ ಕಿರಿ ಕಿರಿ ಇದ್ದದ್ದೇ. ಆದರೆ ಭೂಮಿ ಮೇಲೆ ಆಗುವ ಟ್ರಾಫಿಕ್ ಜಾಮ್ ಆಗಸದಲ್ಲಿ ಆದರೆ ಹೇಗಿರುತ್ತದೆ..ಇದು ಆಶ್ಚರ್ಯವಾದರೂ ಸತ್ಯ.
ಹೌದು, ಯುಎಸ್ ಆಗಸದಲ್ಲಿ ಟ್ರಾಫಿಕ್ ಜಾಮ್ ಆಗಲಿದೆ ಎನ್ನುತ್ತಿವೆ ಮೂಲಗಳು. ಹೊಸ ವರ್ಷದವರೆಗೆ ಅಲ್ಲಿನ ಜನರಿಗೆ ರಜೆಗಳು ಹೆಚ್ಚಾಗಿದ್ದು, ಈ ಸಮಯದಲ್ಲಿ ಸುಮಾರು 70 ಲಕ್ಷಕ್ಕೂ ಅಧಿಕ ಮಂದಿ ವಿಮಾನದಲ್ಲಿ ಪ್ರಯಾಣ ಮಾಡಲಿದ್ದಾರಂತೆ.
ಹೀಗಾಗಿ ಟ್ರಾಫಿಕ್ ಜಾಮ್ ಆಗಸದಲ್ಲಿ ಆಗಬಹುದು ಎನ್ನಲಾಗಿದೆ. ಇನ್ನು 16 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯಾಗುತ್ತಿದೆಯಂತೆ. ಈ ದೇಶದಲ್ಲಿ ಯಾವಾಗಲು 12 ಸಾವಿರ ವಿಮಾನಗಳು ಓಡಾಡುತ್ತವೆಯಂತೆ.

ಆಗಸದಲ್ಲಿ ಟ್ರಾಫಿಕ್ ಜಾಮ್....¶¶ ಆಗಸದಲ್ಲಿ ಟ್ರಾಫಿಕ್ ಜಾಮ್....¶¶ Reviewed by Space encyclopaedia on December 28, 2019 Rating: 5

No comments:

Powered by Blogger.