Breaking News

test

ಬಿಗ್ ನ್ಯೂಸ್: ಇನ್ಮುಂದೆ ATM ನಲ್ಲಿ ಹಣ ವಿತ್ ಡ್ರಾ ಮಾಡಲು ಹೊಸ ವ್ಯವಸ್ಥೆ

ಬಿಗ್ ನ್ಯೂಸ್: ಇನ್ಮುಂದೆ ATM ನಲ್ಲಿ ಹಣ ವಿತ್ ಡ್ರಾ ಮಾಡಲು ಹೊಸ ವ್ಯವಸ್ಥೆ

ನವದೆಹಲಿ: ಜನವರಿ 1 ರಿಂದ ಒಟಿಪಿ ಆಧಾರಿತ ವಿತ್ ಡ್ರಾ ವ್ಯವಸ್ಥೆ ಜಾರಿಗೆ ತರಲು ಭಾರತೀಯ ಸ್ಟೇಟ್ ಬ್ಯಾಂಕ್ ಮುಂದಾಗಿದೆ.
ಇನ್ನು ಮುಂದೆ ಎಟಿಎಂಗಳಲ್ಲಿ ಹಣ ಪಡೆಯುವ ಸಂದರ್ಭದಲ್ಲಿ ಒನ್ ಟೈಮ್ ಪಾಸ್ ವರ್ಡ್ ನಮೂದಿಸಬೇಕು. ರಾತ್ರಿ 8 ಗಂಟೆಯಿಂದ ಬೆಳಗ್ಗೆ 8 ಗಂಟೆಯವರೆಗೆ 10 ಸಾವಿರ ರೂಪಾಯಿಗಿಂತಲೂ ಹೆಚ್ಚು ಹಣ ವಿತ್ ಡ್ರಾ ಮಾಡುವವರಿಗೆ ಮಾತ್ರ ಈ ನಿಯಮ ಅನ್ವಯವಾಗಲಿದೆ.
ಎಟಿಎಂ ಕಾರ್ಡ್ ದುರ್ಬಳಕೆ ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಎಟಿಎಂ ಯಂತ್ರದಲ್ಲಿ ತಮ್ಮ ಪಿನ್ ಸಂಖ್ಯೆ, 10 ಸಾವಿರ ರೂಪಾಯಿ ಅದಕ್ಕಿಂತ ಹೆಚ್ಚು ಮೊತ್ತವನ್ನು ನಮೂದಿಸಿದ ನಂತರ ಮೊಬೈಲ್ ಗೆ 4 ಅಂಕಿಗಳ ಒಟಿಪಿ ಸಂದೇಶ ಬರುತ್ತದೆ. ಅದನ್ನು ಎಟಿಎಂನಲ್ಲಿ ನಮೂದಿಸಿದ ಬಳಿಕ ಗ್ರಾಹಕರು ಹಣ ಪಡೆಯಬಹುದಾಗಿದೆ ಎಂದು ಹೇಳಲಾಗಿದೆ.
ಬಿಗ್ ನ್ಯೂಸ್: ಇನ್ಮುಂದೆ ATM ನಲ್ಲಿ ಹಣ ವಿತ್ ಡ್ರಾ ಮಾಡಲು ಹೊಸ ವ್ಯವಸ್ಥೆ ಬಿಗ್ ನ್ಯೂಸ್: ಇನ್ಮುಂದೆ ATM ನಲ್ಲಿ ಹಣ ವಿತ್ ಡ್ರಾ ಮಾಡಲು ಹೊಸ ವ್ಯವಸ್ಥೆ Reviewed by Space encyclopaedia on December 29, 2019 Rating: 5

No comments:

Powered by Blogger.