ಗುಡ್ ನ್ಯೂಸ್: ಪ್ರತಿ ನಗರದಲ್ಲೂ ಆರಂಭವಾಗಲಿದೆ ʼಜಿಯೋʼ ಪೆಟ್ರೋಲ್ ಬಂಕ್
ಟೆಲಿಕಾಂ ಕ್ಷೇತ್ರದಲ್ಲಿ ಧೂಳೆಬ್ಬಿಸಿದ್ದ ರಿಲಾಯನ್ಸ್ ಜಿಯೋ, ನಗರ ನಗರಗಳಲ್ಲಿ ಪೆಟ್ರೋಲ್ ಬಂಕ್ ತೆರೆಯಲಿದೆ. ಮುಖೇಶ್ ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಯುಕೆ ಇಂಧನ ಕಂಪನಿ ಬಿ ಪಿ ಪಿ ಎಲ್ ಸಿ ನಡುವೆ ಹೊಸ ಒಪ್ಪಂದವಾಗಿದೆ. ಎರಡೂ ಕಂಪನಿಗಳು ಒಂದಾಗಿ ಭಾರತದಲ್ಲಿ ಪೆಟ್ರೋಲ್ ಬಂಕ್ ಗಳ ಜಾಲವನ್ನು ಹೆಚ್ಚಿಸುವತ್ತ ಗಮನ ಹರಿಸಲಿವೆ.
ಜಿಯೋ-ಬಿಪಿ ಬ್ರಾಂಡ್ ನಡುವಿನ ಒಪ್ಪಂದದ ಪ್ರಕಾರ, ಭಾರತದಲ್ಲಿ ಪೆಟ್ರೋಲ್ ಪಂಪ್‌ಗಳ ಸಂಖ್ಯೆಯನ್ನು ಈಗಿರುವ 1400 ರಿಂದ 5500 ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಪ್ರಸ್ತುತ, ರಿಲಯನ್ಸ್ ದೇಶದಲ್ಲಿ ಒಟ್ಟು 1400 ಪೆಟ್ರೋಲ್ ಪಂಪ್‌ಗಳನ್ನು ಹೊಂದಿದೆ. ಇದಲ್ಲದೆ, ಕೆಲವು ವಿಮಾನ ನಿಲ್ದಾಣಗಳಲ್ಲಿ ಸುಮಾರು 30 ವಿಮಾನ ಇಂಧನ ಕೇಂದ್ರಗಳಿವೆ.
ಪೆಟ್ರೋಲ್ ಬಂಕ್ ವಿಸ್ತರಣೆಗೆ ಸಹಿ ಹಾಕಿದ ಒಪ್ಪಂದದಲ್ಲಿ ಆರ್‌ಐಎಲ್ ಶೇಕಡಾ 51ರಷ್ಟು ಪಾಲನ್ನು ಹೊಂದಿದ್ದರೆ, ಬಿಪಿಗೆ 49 ಪ್ರತಿಶತದಷ್ಟು ಪಾಲು ಹೊಂದಿದೆ.
ಗುಡ್ ನ್ಯೂಸ್: ಪ್ರತಿ ನಗರದಲ್ಲೂ ಆರಂಭವಾಗಲಿದೆ ʼಜಿಯೋʼ ಪೆಟ್ರೋಲ್ ಬಂಕ್
Reviewed by Space encyclopaedia
on
December 17, 2019
Rating:
Reviewed by Space encyclopaedia
on
December 17, 2019
Rating:

No comments: