ಆಸ್ತಿ ಬಂದ್ಮೇಲೆ ಬೀದಿಗೆ ತಳ್ಳಿದ ಮಕ್ಕಳು, ಕೋರ್ಟ್ ಮೆಟ್ಟಿಲೇರಿ ಜಮೀನು ವಾಪಸ್ ಪಡೆದ ಹಿರಿಯ ಜೀವ ಗಂಗಾವತಿ ನಗರದ ಸತ್ಯನಾಯರಣಪೇಟೆಯ
ಆಸ್ತಿ ಬಂದ್ಮೇಲೆ ಬೀದಿಗೆ ತಳ್ಳಿದ ಮಕ್ಕಳು, ಕೋರ್ಟ್ ಮೆಟ್ಟಿಲೇರಿ ಜಮೀನು ವಾಪಸ್ ಪಡೆದ ಹಿರಿಯ ಜೀವ
ಕೊಪ್ಪಳ: "ಮಕ್ಕಳಿಗೆ ಆಸ್ತಿ ಮಾಡ್ಬೇಡಿ..ಮಕ್ಕಳನ್ನೇ ಆಸ್ತಿ ಮಾಡಿ" ಅನ್ನೋ ಮಾತಿದೆ. ಆದ್ರೆ ಕೊಪ್ಪಳದಲ್ಲಿ ಪೋಷಕರೊಬ್ಬರು ಮಕ್ಕಳಿಗಾಗಿ ಆಸ್ತಿ ಮಾಡಿ ಬೀದಿಗೆ ಬಂದಿರುವ ಘಟನೆ ನಡೆದಿದೆ.
ಜಿಲ್ಲೆಯ ಗಂಗಾವತಿ ನಗರದ ಸತ್ಯನಾಯರಣಪೇಟೆಯ ನಿವಾಸಿ ಮನೋಹರ್ ದೇಸಾಯಿ ಅವರಿಗೆ 6 ಮಕ್ಕಳು. ಅದ್ರಲ್ಲಿ 3 ಗಂಡು ಹಾಗೂ 3 ಜನ ಹೆಣ್ಣುಮಕ್ಕಳಿದ್ದಾರೆ. ಕೃಷಿಯನ್ನೇ ನಂಬಿಕೊಂಡು ಬಂದ ಇವರು ತಮ್ಮ ಮಕ್ಕಳಾದ ರಾಘವೇಂದ್ರ, ಯೋಗೇಶ, ವಿನಯ್ದೇಸಾಯಿ ಹೆಸರಿಗೆ ತಮ್ಮ 3 ಎಕರೆ ಜಮೀನನ್ನು ರಿಜಿಸ್ಟರ್ ಮಾಡಿಕೊಟ್ಟಿದ್ರು.
ಈಗ ಮಕ್ಕಳು, ಮುಪ್ಪಿನಲ್ಲಿರುವ ತಂದೆಯ ಜೀವನೋಪಾಯಕ್ಕೆ ಮತ್ತು ಚಿಕಿತ್ಸೆಗೂ ಹಣ ಕೊಡದೇ ಬೀದಿಗೆ ತಳ್ಳಿದ್ದಾರೆ. ಈ ಬಗ್ಗೆ ಮನೋಹರ್ ದೇಸಾಯಿ, ಹಿರಿಯ ನಾಗರೀಕ ರಕ್ಷಣೆ ಕಾಯ್ದೆ ಅಡಿಯಲ್ಲಿ ನನಗೆ ನ್ಯಾಯ ಕೊಡ್ಸಿ ಅಂತಾ ಕೊಪ್ಪಳ ಎಸಿ ಕೋರ್ಟ್ ಮೊರೆ ಹೋಗಿದ್ದರು.
ಇದ್ರಂತೆ ಎಸಿ ಗೀತಾ ಅವರು ಮನೋಹರ್ ದೇಸಾಯಿ ಅವರ ಮಕ್ಕಳಾದ ರಾಘವೇಂದ್ರ, ಯೋಗೇಶ ಹಾಗೂ ವಿನಯ್ ದೇಸಾಯಿ ಹೆಸರಿನಲ್ಲಿರುವ 3 ಎಕರೆ ಆಸ್ತಿಯನ್ನು ಮರಳಿ ಮನೋಹರ್ ದೇಸಾಯಿ ಹೆಸರಿಗೆ ನೋಂದಾಯಿಸಲು ಖಡಕ್ ಆದೇಶ ನೀಡಿದ್ದಾರೆ.
ಇಷ್ಟೇ ಅಲ್ಲದೇ ಇನ್ನೂ ಸಾಕಷ್ಟು ಭೂಮಿ ಮಕ್ಕಳ ಹೆಸರಿನಲ್ಲಿ ಇದ್ದು, ಅದನ್ನು ಅವರೇ ಅನುಭವಿಸಲಿ ಅಂತ ದೇಸಾಯಿ ಹೇಳಿದ್ದಾರೆ. ಇದ್ರ ಜೊತೆಗೆ ಮಕ್ಕಳು ಜನ್ಮ ನೀಡಿದ ತಂದೆ ತಾಯಿಯನ್ನು ಆಸ್ತಿಗಾಗಿ ದೂರ ಮಾಡಬೇಡಿ, ಅವರಿಗಾಗಿ ಒಂದಿಷ್ಟು ಕಾಳಜಿ, ಪ್ರೀತಿ ತೋರಿಸಿ ಅಂತಾ ಹೇಳಿದ್ರು.
ಕೊಪ್ಪಳದಲ್ಲಿ ಇಂತಹ 12 ಪ್ರಕರಣಗಳು ಎಸಿ ಕೋರ್ಟ್ನಲ್ಲಿದ್ದು, ಈಗಾಗಲೇ 6 ಕೇಸ್ಗಳನ್ನು ಇತ್ಯರ್ಥ ಪಡಿಸಲಾಗಿದೆ. ಉಳಿದ ಕೇಸ್ಗಳ ವಿಚಾರಣೆ ನಡೆಯುತ್ತಿದೆ. ಮಕ್ಕಳಿಂದ ಹಿರಿಯನಾಗರಿಕರಿಗೆ ತೊಂದರೆಯಾದರೆ ವೃದ್ಧಾಶ್ರಮ ಸೇರುವ ಮುನ್ನ ಒಮ್ಮೆ ಎಸಿ ಕೋರ್ಟ್ ಮೆಟ್ಟಿಲು ಏರಿ ನ್ಯಾಯ ಪಡೆಯಬಹುದು. ಅಲ್ದೇ ಅಧಿಕಾರಿಗಳು ಇದರ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಸಹ ಮಾಡಬೇಕಾಗಿದೆ ಎಂದು ಕೊಪ್ಪಳ ಎಸಿ ಗೀತಾ ಅಭಿಪ್ರಾಯಪಟ್ಟಿದ್ದಾರೆ.
ಆಸ್ತಿ ಬಂದ್ಮೇಲೆ ಬೀದಿಗೆ ತಳ್ಳಿದ ಮಕ್ಕಳು, ಕೋರ್ಟ್ ಮೆಟ್ಟಿಲೇರಿ ಜಮೀನು ವಾಪಸ್ ಪಡೆದ ಹಿರಿಯ ಜೀವ ಗಂಗಾವತಿ ನಗರದ ಸತ್ಯನಾಯರಣಪೇಟೆಯ
Reviewed by Space encyclopaedia
on
December 15, 2019
Rating:
No comments: