Breaking News

test

2 ವರ್ಷದ ಪೋರನಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​​ ದಾಖಲೆ..! ಯಾಕೆ ಗೊತ್ತಾ..?

2 ವರ್ಷದ ಪೋರನಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​​ ದಾಖಲೆ..! ಯಾಕೆ ಗೊತ್ತಾ..?
ತುಮಕೂರು: ತುಮಕೂರಿನ ಸದಾಶಿವನಗರದ ನಿವಾಸಿ ಮಂಜುನಾಥ್ ಹಾಗೂ ರೂಪ ದಂಪತಿಯ ಪುತ್ರ ದೈವಿಕ್ ಪ್ರತಿಷ್ಠಿತ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ನ ಪುಟ ಸೇರಿದ್ದಾನೆ. ದಾಖಲೆ ನಿರ್ಮಿಸಿರೋ ಪೋರನಿಗೆ ಕೇವಲ ಎರಡು ವರ್ಷ ಮಾತ್ರ. ಈ ಮುದ್ದು ಕಂದ ಮಾಡಿರೋ ಸಾಧನೆ ಏನು ಗೊತ್ತಾ..?
ಕರ್ನಾಟಕದ ಈ ಹುಡುಗ ಎಕ್ಸಲೆಂಟ್‌ ಮೆಮೊರಿ ಪವರ್‌ ಕಿಡ್‌..!
ಯಸ್‌.. ಎಕ್ಸಲೆಂಟ್ ಮೆಮೊರಿ ಪವರ್‌ನಿಂದಲೇ ಈಗ ರೆಕಾರ್ಡ್‌ ಮಾಡಿದ್ದಾನೆ 2 ವರ್ಷದ ಪೋರ. ಈತನ ಮೆಮೊರಿ ಪವರ್​ ಅದ್ಭುತವಾಗಿದ್ದು, ಯಾವ ಗಣ್ಯರು, ಪ್ರಾಣಿ, ಪಕ್ಷಿ, ವಾಹನಗಳ ಫೋಟೋವನ್ನ ಒಮ್ಮೆ ನೋಡಿದರೆ ಸಾಕು ಅವರ ಬಗ್ಗೆ ಪಟ ಪಟನೇ ಹೇಳುತ್ತಾನೆ. ಅಲ್ಲದೇ ರಾಷ್ಟ್ರದ 30 ಮಂದಿ ಗಣ್ಯರ ಹೆಸರು, 8 ಮಂದಿ ನೊಬೆಲ್ ಪ್ರಶಸ್ತಿ ಪುರಸ್ಕೃತರು, 18 ವಾಹನಗಳು, 36 ಪ್ರಾಣಿಗಳು, 12 ಹಣ್ಣುಗಳು, 10 ಇಂಡಿಯನ್ ನ್ಯಾಷನಲ್ ಸಿಂಬಲ್ಸ್ ಹಾಗು 11 ಬಾಡಿ ಪಾರ್ಟ್ಸ್‌ಗಳ ಹೆಸರನ್ನ ಹೇಳ್ತಾನೆ.
ದೈವಿಕ್‌ ಪಟಪಟನೇ ಹೇಳುವ ವಿಡಿಯೋ ಒಂದನ್ನ ರೆಕಾರ್ಡ್‌ ಮಾಡಿದ ಈತನ ಹೆತ್ತವರು ಕಿಡ್ಸ್ ಮತ್ತು ಯಂಗ್‌ಸ್ಟರ್‌ಗಳಿಗೆ ಕೊಡ ಮಾಡುವ ರಾಷ್ಟ್ರದ ಪ್ರತಿಷ್ಠಿತ ಇಂಡಿಯಾ ಬುಕ್ ಆಫ್ ರೆಕಾರ್ಡ್ ವೆಬ್‌ ಸೈಟ್‌ಗೆ ಅಪ್‌ಲೋಡ್ ಕೂಡ ಮಾಡಿದ್ರು. ವಿಡಿಯೋ ವೀಕ್ಷಿಸಿದ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಂಸ್ಥೆ ದೈವಿಕ್‌ಗೆ 'ಎಕ್ಸಲೆಂಟ್ ಮೆಮೊರಿ ಕಿಡ್‌' ಅವಾರ್ಡ್ ನೀಡಿದೆ.
ಇನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ ಯುವ ಜನಾಂಗದ ಅದ್ಭುತವಾದ ಕ್ರಿಯಾಶೀಲತೆಯನ್ನ ಗುರುತಿಸುವ ರಾಷ್ಟ್ರಮಟ್ಟದ ಒಂದು ಸಂಸ್ಥೆ. ಈ ಸಂಸ್ಥೆ ಪ್ರತಿ ವರ್ಷವೂ ಭಾರತದ ಪ್ರತಿ ರಾಜ್ಯದ ಹೈಪರ್ ಆಕ್ಟೀವ್ ಮತ್ತು ಟ್ಯಾಲೆಂಟೆವುಳ್ಳ ಪುಟ್ಟ ಮಕ್ಕಳು, ಯುವಕರನ್ನ ಗುರುತಿಸಿ ಪ್ರಶಸ್ತಿ ನೀಡುತ್ತೆ.
ಅದರಂತೆ 2019 ನೇ ಸಾಲಿನ ಎಕ್ಸಲೆಂಟ್ ಮೆಮೊರಿ ಕಿಡ್ ಅವಾರ್ಡ್‌ಗೆ ದೈವಿಕ್ ಆಯ್ಕೆಯಾಗಿದ್ದಾನೆ. ತಮ್ಮ ಪುಟ್ಟ ಕಂದ ಈ ಅವಾರ್ಡ್‌ ಪಡೆದಿದ್ದಕ್ಕೆ ಪೋಷಕರ ಖುಷಿಗೆ ಪಾರವೇ ಇಲ್ಲದಂತಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ದೈವಿಕ್ ತಾಯಿ ರೂಪ, ಚಿಕ್ಕ ವಯಸ್ಸಿಗೆ ರೆಕಾರ್ಡ್ ಮಾಡಿದ ಮಗನನ್ನ ಒಳ್ಳೆ ಸಿಂಗರ್ ಅಥವಾ ಸ್ಪೋರ್ಟ್ಸ್‌ಮೆನ್ ಆಗಿ ಮಾಡ್ತೀವಿ ಅಂತ ಹೇಳಿದ್ದಾರೆ.
ಒಟ್ನಲ್ಲಿ ತಮ್ಮ ಮಕ್ಕಳು ಬೇರೆ ಬೇರೆ ಸ್ಕಿಲ್ಸ್, ಆಕ್ಟಿವಿಟೀಸ್‌ನಲ್ಲಿ ತೊಡಗಬೇಕೆಂದು ಹೆತ್ತವರು ನಾನಾ ಪ್ರಯತ್ನ ಮಾಡ್ತಿದ್ದಾರೆ. ಈ‌ ನಡುವೆ ಕೇವಲ ಎರಡು ವರ್ಷದ ದೈವಿಕ್ ರಾಷ್ಟ್ರ ಮಟ್ಟದ ಅವಾರ್ಡ್‌ವೊಂದನ್ನ ಗಿಟ್ಟಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾನೆ.
ವಿಶೇಷ ವರದಿ: ಹೆಬ್ಬಾಕ ತಿಮ್ಮೇಗೌಡ, ನ್ಯೂಸ್‌ಫಸ್ಟ್ ತುಮಕೂರು

2 ವರ್ಷದ ಪೋರನಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​​ ದಾಖಲೆ..! ಯಾಕೆ ಗೊತ್ತಾ..? 2 ವರ್ಷದ ಪೋರನಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​​ ದಾಖಲೆ..! ಯಾಕೆ ಗೊತ್ತಾ..? Reviewed by Space encyclopaedia on December 22, 2019 Rating: 5

No comments:

Powered by Blogger.