Breaking News

test

ಏರ್‌ ಪಾಡ್‌ ನುಂಗಿ ಆಸ್ಪತ್ರೆ ಸೇರಿದ 7 ವರ್ಷದ ಬಾಲಕ

ಏರ್‌ ಪಾಡ್‌ ನುಂಗಿ ಆಸ್ಪತ್ರೆ ಸೇರಿದ 7 ವರ್ಷದ ಬಾಲಕ

ಕ್ರಿಸ್‌ಮಸ್‌ಗೆಂದು ಉಡುಗೊರೆಯಾಗಿ ಪಡೆದಿದ್ದ ಆಪಲ್ ಏರ್‌ಪಾಡ್‌ ಒಂದನ್ನು ನುಂಗಿಬಿಟ್ಟ ಏಳು ವರ್ಷದ ಬಾಲಕನೊಬ್ಬ ಆಸ್ಪತ್ರೆಯಲ್ಲೇ ಹಬ್ಬದ ದಿನ ಕಳೆಯುವಂತಾಗಿದೆ.
ಬಾಲಕನ ಬೆನ್ನುಮೂಳೆಯ ಬಳಿ ಹೋಗಿ ಹೊಟ್ಟೆಯಲ್ಲಿ ಸೇರಿಕೊಂಡಿದ್ದ ಏರ್‌ಪಾಡ್‌ನ ಎಕ್ಸ್‌ರೇ ಚಿತ್ರವನ್ನು ಆತನ ತಾಯಿ ಕಯಾರಾ ಸ್ಟ್ರೌಡ್‌ ಫೇಸ್ಬುಕ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.
ಏರ್‌ಪಾಡ್‌ನಲ್ಲಿ ಆಟವಾಡುತ್ತಾ ಇದ್ದ ವೇಳೆ ಅಪ್ಪಿತಪ್ಪಿ ಅದನ್ನು ನುಂಗಿಬಿಟ್ಟ ಬಾಲಕನನ್ನು ತಕ್ಷಣವೇ ಮಕ್ಕಳ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲು ಮಾಡಲಾಯಿತು. ಸದ್ಯಕ್ಕೆ ಬಾಲಕ ಸೇಫ್‌.
ಏರ್‌ಪಾಡ್‌ನಂಥ ವಸ್ತುವನ್ನು ಆಡುವ ಹುಡುಗನಿಗೆ ಗಿಫ್ಟ್ ಮಾಡಿದ ತಾಯಿಯನ್ನು ಕೆಲ ನೆಟ್ಟಿಗರು ಟೀಕಿಸಿದರೆ, ಮತ್ತೆ ಕೆಲವರು ಏರ್‌ಪಾಡ್‌ ಅನ್ನು ನುಂಗುವಷ್ಟು ಪುಟ್ಟ ಬಾಲಕನೇ ಆತ ಎಂದು ಚಕಿತರಾಗಿದ್ದಾರೆ.

ಏರ್‌ ಪಾಡ್‌ ನುಂಗಿ ಆಸ್ಪತ್ರೆ ಸೇರಿದ 7 ವರ್ಷದ ಬಾಲಕ ಏರ್‌ ಪಾಡ್‌ ನುಂಗಿ ಆಸ್ಪತ್ರೆ ಸೇರಿದ 7 ವರ್ಷದ ಬಾಲಕ Reviewed by Space encyclopaedia on January 04, 2020 Rating: 5

No comments:

Powered by Blogger.